City News

ನೇರ ಸಂತ್ರಸ್ತರಿಗೆ ನೆರವು ನೀಡುವಂತೆ ಸಾರ್ವಜನಿಕರು-ಕೈಗಾರಿಕೋದ್ಯಮಿಗಳಲ್ಲಿ ಮನವಿ

ಬೆಂಗಳೂರು: ಕೊಡಗು, ಕೇರಳ, ಮಲೆನಾಡು ಭಾಗಗಳಲ್ಲಿ ನೆರೆಯಿಂದ ಸಂತ್ರಸ್ತರಾಗಿರುವ ಕುಟುಂಬಗಳಿಗೆ ನೆರವು ನೀಡಲು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಸಾರ್ವಜನಿಕರು ಹಾಗೂ ಕೈಗಾರಿಕೋದ್ಯಮಿಗಳಲ್ಲಿ ಮನವಿ ಮಾಡಿದರು. ಇಂದು ಬೆಳಗ್ಗೆ ತಮ್ಮ ನಿವಾಸದಲ್ಲೂ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊಡಗು, ಮಂಗಳೂರು ಭಾಗದಲ್ಲಿ ಮಹಿಳೆಯಿಂದ ಬಹಳಷ್ಟು ಮಂದಿ ನಿರ್ವಸತಿಗರಾಗಿದ್ದಾರೆ. ಅವರಿಗೆ ಆಹಾರ ಬಟ್ಟೆ, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ ಸೇರಿದಂತೆ ಇತರ ಮೂಲಭೂತ ಅಗತ್ಯಗಳಿಗೆ ಬೇಡಿಕೆ ಹೆಚ್ಚಾಗಿದೆ. ತಮಗೆ ಬಂದಿರುವ ಮಾನವೀಯ ಅನುಸಾರ ತಾವು ರಾಮನಗರ ಜಿಲ್ಲಾಡಳಿತದ ಮೂಲಕ ಅಗತ್ಯ ವಸ್ತುಗಳನ್ನು ಪೂರೈಸಲು ಕ್ರಮ ಕೈಗೊಂಡಿದ್ದೇನೆ ಎಂದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಶಾಸಕರ ಸಹಕಾರದಿಂದ ಬಟ್ಟೆ,ನೀರು, ಆಹಾರ, ಮತ್ತಿತ್ತರ ಸೌಲಭ್ಯಗಳನ್ನು ಸಂಗ್ರಹಿಸಲಾಗುತ್ತಿದೆ.

ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯಲ್ಲಿರುವ ಗಾರ್ಮೆಂಟ್ಸ್ ಫ್ಯಾಕ್ಟರಿಗಳು ತಮ್ಮಲ್ಲಿನ ಸೆಕೆಂಡ್ಸ್ ಬಟ್ಟೆಗಳನ್ನು ರಾಮಾಂಕ್ಗರ ಜಿಲ್ಲಾಧಿಕಾರಿ ಕಚೇರಿಗೆ ತಲುಪಿಸಬೇಕು ಎಂದು ಮನವಿ ಮಾಡಲಾಗಿದೆ. ಹೊದಿಕೆ, ಪಂಚೆ, ಸೀರೆ, ಶರ್ಟ್ ಸೇರಿದಂತೆ ದಿನ ಬಳಕೆಯ ಬಟ್ಟೆಗಳನ್ನು ಸಾರ್ವಜನಿಕರು ದಾನವಾಗಿ ನೀಡಬೇಕು. ಆರ್ಥಿಕ ನೆರವು ಕೂಡ ನೀಡಬಹುದು ಎಂದು ಅವರು ಹೇಳಿದರು. ರಾಮನಗರ ಜಿಲ್ಲಾಧಿಕಾರಿ ಕಛೇರಿಯಲ್ಲಿ ಬಿ.ಜಿ.ಶ್ರೀನಿವಾಸ್ ಎಂಬ ಅಧಿಕಾರಿಯನ್ನು ನೇಮಿಸಲಾಗಿದೆ..

Advertisements