City News

ನೆರ ಸಂತ್ರಸ್ತರಿಗಾಗಿ ಅಕ್ಕಿ ಮೂಟೆ ಹೊತ್ತ ಜಿಲ್ಲಾಧಿಕಾರಿಗಳು…!

ತಿರುವಂತಪುರ:ಶತಮಾನದ ಮಳೆಗೆ ದೇವರನಾಡು ಕೇರಳ ನಡುಗಿ ಹೋಗಿದೆ. ಮಹಮಳೆಗೆ ಎವರೆವೆ 300ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಅಧಿಕಾರಿಗಳು ಕೂಡ ಕೈ ಜೋಡಿಸಿದ್ದಾರೆ.

ರಾಕ್ಷಸೀ ಮಳೆ ಇನ್ನು ಮುಂದುವರೆದಿದ್ದು, ಜನರ ನೆರವಿಗೆ ಸೇನೆ ಧಾವಿಸಿದೆ. ಸಾವಿರಾರು ಜನರನ್ನು ನಿರಾಶ್ರಿತರ ಸ್ಜಿಬಿರಕ್ಕೆ ಸ್ಥಳಾಂತರಿಸಲಾಗಿದ್ದು, ಜಿಲ್ಲಾಡಳಿತ ಆಹಾರ ಪೂರೈಸುತ್ತಿದೆ. ಅಷ್ಟೇ ಅಲ್ಲ ಸ್ವತಃ ಜಿಲ್ಲಾಧಿಕಾರಿಗಳಿಬ್ಬರು ತಮ್ಮ ಹೆಗಲ ಮೇಲೆ ಅಕ್ಕಿ ಮೂಟೆ ಇಳಿಸಿ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.

ವೈನಾಡಿನ ಜಿಲ್ಲಾಧಿಕಾರಿ ಎನ್.ಎಸ್.ಕೆ ಉಮೇಶ್ ಹಾಗೂ ಅಧಿಕಾರಿ ಎಂ.ಜಿ ರಾಜಮಾಣಿಕ್ಯ ಈ ಇಬ್ಬರು ಅಧಿಕಾರಿಗಳು ಈಗ ಜನರ ಪಾಲಿಗೆ ಹೀರೊ ಆಗಿದ್ದಾರೆ..

Advertisements