Crime

ಕೊಲೆ ಪ್ರಕರಣವನ್ನು ಒಂದೇ ದಿನದಲ್ಲಿ ಬೇಧಿಸಿದ ಮಂಡ್ಯ ಪೊಲೀಸ್

ಮಂಡ್ಯ: ಸೋಮವಾರ ಮದ್ದೂರು ತಾಲೂಕಿನ ಕೊಂಗಬಾರನದೊಡ್ಡಿ ಗ್ರಾಮದಲ್ಲಿ ಮಹಿಳೆವೊರ್ವಳು ಅನುಮಾನಾಸ್ಪದವಾಗಿ ಸಾವನಪ್ಪಿದ್ದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.

ಸಾವಿಗೆ ಕಾರಣ?

ಆಸ್ತಿ ವಿಚಾರವಾಗಿ ಮಲತಾಯಿ(ಸರೋಜಮ್ಮ)ಳನ್ನು ಮಗ ಲೋಕೇಶ್ ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

ಲೋಕೇಶ್ ಸರೋಜಮ್ಮನನ್ನು ಕೊಲೆಗೈದು, ನಂತರ ಶವ ಸಾಗಿಸಲು ಯತ್ನಿಸಿದ್ದ. ಅದು ಸಾಧ್ಯವಾಗದೇ ಮನೆ ಮುಂದೆ ಬಿಟ್ಟು ಪರಾರಿಯಾಗಿದ್ದಾನೆ. ಪೊಲೀಸರ ತನಿಖೆ ವೇಳೆ ಇದು ಬಯಲಿಗೆ ಬಂದಿದೆ ಎನ್ನಲಾಗ್ತಿದೆ. ಒಂದೇ ದಿನದಲ್ಲಿ ಮದ್ದೂರು ಪೋಲಿಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಸರೋಜಮ್ಮ (36) ಕೂಲಿ ಕೆಲಸ ಮುಗಿಸಿ ಮನೆಗೆ ಬಂದಿದ್ದಳು. ನಂತರ ಅನುಮಸ್ಪದವಾಗಿ ಸಾವನಪ್ಪಿದ್ದಳು..

Advertisements