City News Political

ಕರುಣಾನಿಧಿ ವಿಧಿವಶ : ನಾಳೆ ಏನು ನಡೆಯುತ್ತದೆ

ಚನ್ನೈ : ಕರುಣಾನಿಧಿ ಪಾರ್ಥಿವ ಶರೀರವನ್ನು ಗೋಪಾಲಪುರಂ ನಿವಾಸಕ್ಕೆ ಕೊಂಡೊಯ್ದು ರಾತ್ರಿ 8-30 ರಿಂದ ಬೆಳಗ್ಗೆ 1 ಗಂಟೆಯವರೆಗೂ ಅಲ್ಲಿ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ನಂತರ ಬೆಳಗ್ಗೆ ಸಿಐಟಿ ಕಾಲೋನಿಯಲ್ಲಿರುವ ಕರುಣಾನಿಧಿ ಪುತ್ರಿ ಕನ್ನಿಮೋಳಿ ಅವರ ನಿವಾಸಕ್ಕೆ ಪಾರ್ಥಿವ ಶರೀರ ಕೊಂಡೊಯ್ದು ಬೆಳಗ್ಗೆ 1 ಗಂಟೆಯಿಂದ 3 ಗಂಟೆಯವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.
ನಂತರ 4 ಗಂಟೆಗೆ ಪಾರ್ಥಿವ ಶರೀರವನ್ನು ರಾಜಾಜಿ ಹಾಲ್ ಗೆ ತಂದು ರಾಜಕೀಯ ನಾಯಕರು, ಪಕ್ಷದ ಕಾರ್ಯಕರ್ತರು ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ….

Advertisements