Crime

ಶಿರೂರು ಶ್ರೀ ಪ್ರಕರಣ: ರಮ್ಯಾ ಶೆಟ್ಟಿ ಪರಾರಿಯಾಗಲು ಯತ್ನ

ಮಂಗಳೂರು: ಉಡುಪಿ ಶಿರೂರು ಮಠದ ಶ್ರೀ ಮಠದ ಶ್ರೀ ಲಕ್ಷ್ಮಿವರ ತೀರ್ಥ ಸ್ವಾಮೀಜಿ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆ ಬಳಿಕ ರಮ್ಯಾಶೆಟ್ಟಿ ಪರಾರಿಯಾಗಲು ಯತ್ನಿಸಿದ್ದಾರೆ. ರಮ್ಯಾಶೆಟ್ಟಿ ಬುರ್ಖಾ ಧರಿಸಿ ಭಾನುವಾರ ಸಂಜೆ ಪರಾರಿಯಾಗಲು ಯತ್ನಿಸಿದ್ದು ಇವರನ್ನು ಪೊಲೀಸರು ಬಂಧಿಸಿದ್ದಾರೆ.

ಮೂವರು ಮಹಿಳೆಯರ ಜೊತೆ ಕಾರ್ ನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಬೆಳ್ತಂಗಡಿ ತಾಲ್ಲೂಕಿನ ಅಳದಂಗಡಿ ಶ್ರೀ ಸತ್ಯದೇವತೆ ದೇವಸ್ಥಾನ ಬಳಿ ಕಾರ್ ಪಂಕ್ಚರ್ ಆಗಿದೆ. ಮಾಹಿತಿ ತಿಳಿದು ಉಡುಪಿ ಪೊಲೀಸರು ಸೂಚನೆಯ ಮೇರೆಗೆ ವೇಣುರೂ ಪೋಲಿಸರು ಮೂವರನ್ನು ವಶಕ್ಕೆ ಪಡೆದು ಉಡುಪಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

ಶಿರೂರು ಸ್ವಾಮಿಗಳ ಸಾವಿನ ಪ್ರಕರಣದಲ್ಲಿ ಮಹಿಳೆಯರ ಕೈವಾಡವಿದೆ ಎಂಬ ಮಾಹಿತಿ ಮೇರೆಗೆ ರಮ್ಯಶೆಟ್ಟಿ ಅವರನ್ನು ವಶಕ್ಕೆ ಪಡೆದಿದ್ದರು.
ಸ್ವಾಮೀಜಿ ಅಸಹಜ ಸಾವಿನ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಮಠವನ್ನು ವಶಕ್ಕೆ ಪಡೆದಿದ್ದಾರೆ..

Advertisements