City News

ಇನ್ಮುಂದೆ ನಿಮ್ಮ ಅಂಗೈಯಲ್ಲಿ ಡಾಕ್ಟರ್ ಜೊತೆ ಹೆಲ್ತ್ ಟಾಕ್…

ಬೆಂಗಳೂರು: ಸಾಮಾನ್ಯವಾಗಿ ಅನಾರೋಗ್ಯ ಸಮಸ್ಯೆ ಕಂಡು ಬಂದ್ರೆ, ವೈದ್ಯರ ಬಳಿಯೋ ಅಥವಾ ವೈದ್ಯರನ್ನ ಕರೆಸಿಕೊಂಡು ಚಿಕಿತ್ಸೆ ಪಡೆದುಕೊಳ್ತಿದ್ದವಿ.. ಆದರೆ ಈಗ ಟೆಕ್ನಾಲಜಿ ಮುಂದುವರೆಯುತ್ತಿದಂತೆ ಎಲ್ಲವೂ ಆನ್ಲೈನ್ ಮಯವಾಗಿಬಿಟ್ಟಿದೆ.. ಹೀಗಾಗಿ, ಕೂತಲ್ಲೇ ನುರಿತ ವೈದ್ಯರನ್ನ ಸಂಪರ್ಕಿಸಬಹುದಾಗಿದೆ..

ಹೌದು, 4ಜಿ ಯುಗದ ಆಧುನಿಕತೆಯ ಭರಾಟೆಯಲ್ಲಿ, ತಂತ್ರಜ್ಞಾನದೊಂದಿಗೇ ಕಾಲ ಕಳೆಯುವ ಬ್ಯುಸಿ ವ್ಯಕ್ತಿಗಳೇ ಹೆಚ್ಚು.. ಹೀಗಾಗಿಯೇ ದೇಶದಲ್ಲೇ ಪ್ರಪ್ರಥಮ ಬಾರಿಗೆ ಆನ್ಲೈನ್ನಲ್ಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದು ಕೊಳ್ಳಬಹುದಾದ ಆ್ಯಪ್ ಒಂದನ್ನು ಪರಿಚಯಿಸಲಾಗಿದೆ.. ಅದೇ ಡಾಕ್ಸ್ ಆ್ಯಪ್(DOCS APP). ಅಂದರೆ ಕೂತಲ್ಲೇ ಮೊಬೈಲ್ ಮೂಲಕ ನಮ್ಮ ಗೆ ಬೇಕಾದ ಚಿಕಿತ್ಸೆಯ ವಿವರವನ್ನ ಪಡೆಯಬಹುದಾಗಿದೆ.. ಕಳೆದ 2 ವರ್ಷಗಳಿಂದ ಈ ಆ್ಯಪ್ ಚಾಲ್ತಿಯಲಿದ್ದು, ಇದುವರೆಗೂ ಲಕ್ಷಾಂತರ ಜನರು ಈ ಆ್ಯಪ್ ಬಳಸುತ್ತಿದ್ದಾರೆ.. ಮುಖ್ಯವಾಗಿ, ಚರ್ಮ, ಮಾನಸಿಕ, ಲೈಂಗಿಕ, ಹೃದಯ ಸಂಬಂಧಿ ಚಿಕಿತ್ಸೆಗೆ ಹೆಚ್ಚು ಈ ಆ್ಯಪ್ನ್ನ ಜನರು ಬಳಸ್ತಾರೆ..

ಈ ಡಾಕ್ಟರ್ಸ್ ಆ್ಯಪ್, ಒಟ್ಟು 15ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿದ್ದು, ಆನ್ಲೈನ್ನಲ್ಲೇ ಡಾಕ್ಟರ್ಸ್ಗಳನ್ನ ಕನ್ಸಲ್ಟ್ ಮಾಡಬಹುದು.. 1000 ಕ್ಕೂ ನುರಿತ ವೈದ್ಯರಿದ್ದು, ಕನ್ಸಲ್ಟ್ ಫ್ರೀ ನೂರು ರೂಪಾಯಿಯಿಂದ ಆರಂಭವಾಗಲಿದೆ.. ಇನ್ನು ಈ ಆ್ಯಪ್ ಮೂಲಕ ಸ್ಪೆಷಾಲಿಟಿ ಡಾಕ್ಟರ್ಸ್ಗಳನ್ನ ಆನ್ಲೈನ್ ಮೂಲಕ ಸಂರ್ಪಕಿಸಬಹುದಾಗಿದೆ.. ಬೆಂಗಳೂರಿನ ಇಂದಿರಾನಗರದಲ್ಲಿ ಮೈನ್ ಬ್ರಾಂಚ್ಗಳು ಇದ್ದು, ಕನ್ನಡಿಗರು ರೆಡಿ ಮಾಡಿರೋ ಮೊದಲ ಆ್ಯಪ್ ಇದಾಗಿದೆ.. ತುರ್ತು ಸಂದರ್ಭದಲ್ಲಿ ಈ ಆ್ಯಪ್ ಬಳಸಿ, ವೈದ್ಯರನ್ನ ಕನ್ಸಲ್ಟ್ ಮಾಡಬಹುದು.. ಇನ್ನು ಈ ಆ್ಯಪ್ಗೆ ಟೆಲಿಮೆಡಿಸನ್ ಸೋಸೈಟಿ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದಿದ್ದು, ಸಾಕಷ್ಟು ಪ್ರಶಸ್ತಿ ಪಡೆದುಕೊಂಡಿದೆ.. ಒಟ್ಟಾರೆ, ಅಂಗೈಯಲ್ಲೇ ಆರೋಗ್ಯ ಕ್ಷೇತ್ರದ ಮಾಹಿತಿಯನ್ನ ಈ ಡಾಕ್ಸ್ ಆಪ್ಯ್ ಮೂಲಕ ಪಡೆಯಬಹುದಾಗಿದೆ..

Advertisements