City News

ಶಾಂತಿನಗರದ ಬಿಟಿಎಸ್ ರೋಡ್ ನಲ್ಲಿ ಧರೆಗುರುಳಿದ ಬೃಹತ್ ಗಾತ್ರದ ಮರ..

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸದ್ಯ ಹೇಳಿಕೊಳ್ಳುವ ಮಳೆಯೇನು ಆಗ್ತಿಲ್ಲ.. ಕೇವಲ ಮೋಡ ಮುಸುಕಿದ ವಾತಾವರಣವಿದೆ.. ಸಾಮಾನ್ಯವಾಗಿ ಮಳೆ ಬಂದಾಗ ನಗರದ ನಾನಾ ಭಾಗಗಳಲ್ಲಿ ಮರಗಳು ಧರೆಗುರುಳುತ್ತಿದ್ವು.. ಆದ್ರಿಂಗ ಮಳೆ ಬಾರದೇ ಇದ್ದರೂ, ನಗರದ ಶಾಂತಿನಗರದ ಬಿಟಿಎಸ್ ರೋಡ್ ನಲ್ಲಿ ಬೃಹತ್ ಗಾತ್ರದ ಮರವೊಂದು ಧರೆಗುರುಳಿದೆ.. ಮುಂಜಾನೆ 9-30ಕ್ಕೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬದ ಮೇಲೆ ಬಿದ್ದು ಹಾನಿ ಉಂಟಾಗಿದೆ.. ಮರ ಬಿದ್ದ ಹಿನ್ನಲೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು, ಸಂಚಾರ ಬಂದ್ ಮಾಡಲಾಗಿದೆ.. ಇತ್ತ ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.. ಸದ್ಯ ಸ್ಥಳೀಯ ರು ಬಿಬಿಎಂಪಿ ಗೆ ದೂರು ನೀಡಿದ್ದಾರೆ..

Advertisements