Political

ಹೆಚ್ಡಿಕೆ, ಡಿಕೆಶಿ ನನ್ನ ರಾಜಕೀಯ ವೈರಿಗಳು: ಅವರ ಮುಂದೆ ತೊಡೆತಟ್ಟಿ ನಿಲ್ಲುತ್ತೇನೆ: ಸಿಪಿವೈ

ಚನ್ನಪಟ್ಟಣದ ಜನತೆ ಅಭಿವೃದ್ಧಿಗಿಂತಲೂ ಹೆಚ್ಚಾಗಿ ಕುಮಾರಸ್ವಾಮಿ ಸಿಎಂ ಅಭ್ಯರ್ಥಿ ಎಂಬ ಕಾರಣಕ್ಕೆ ಗೆಲ್ಲಿಸಿದ್ದಾರೆ ಎಂದು ಮಾಜಿ ಶಾಸಕ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ. ಜನ ನನ್ನನ್ನು ಸೋಲಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಒಕ್ಕಲಿಗರನ್ನ ಕಡೆಗಣಿಸಿದೆ ಎಂಬ ಕಾರಣಕ್ಕೆ ಜನತೆ ಮೈಸೂರು ಭಾಗದದಲ್ಲಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸಿದ್ದಾರೆ ಎಂದು ಸೋಲನ್ನು ಒಪ್ಪಿಕೊಂಡಿದ್ದಾರೆ.

ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸೋಲುಂಡಿದ್ದ ಯೋಗೇಶ್ವರ್ ಇಂದು ಚನ್ನಪಟ್ಟಣದಲ್ಲಿ ಕಾರ್ಯಕರ್ತರ ಕೃತಜ್ಞತಾ ಸಮಾವೇಶ ನಡೆಸಿದ್ದಾರೆ. ನಗರದ ದೊಡ್ಡಮಳೂರು ಶ್ರೀ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ಸಮಾವೇಶದಲ್ಲಿ 2 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಯೋಗೇಶ್ವರ್ ಕುಮಾರಸ್ವಾಮಿಯವರು ಚನ್ನಪಟ್ಟಣದಿಂದ ಗೆದ್ದಿರುವುದು ಖುಷಿಯ ವಿಚಾರ. ಚನ್ನಪಟ್ಟಣ ಮುಖ್ಯಮಂತ್ರಿ ಕ್ಷೇತ್ರವಾಗಿದೆ. ಕುಮಾರಸ್ವಾಮಿಯವರು ಕ್ಷೇತ್ರದ ಅಭಿವೃದ್ದಿಯನ್ನ ಚೆನ್ನಾಗಿ ಮಾಡಲಿ ಎಂದು ಆಶಿಸುತ್ತೇನೆ ಎಂದರು.

ಜನ ಸ್ತ್ರೀ ಶಕ್ತಿ ಸಾಲಮನ್ನಾ, ರೈತರ ಸಾಲಮನ್ನಾ, ವೃದ್ದರಿಗೆ ಭತ್ಯೆ ಕೊಡುವುದಾಗಿ ಹೇಳಿದ್ದ ಅವರ ಭರವಸೆಗಳಿಗೆ ಮರುಳಾಗಿದ್ದಾರೆ. ಕೊಟ್ಟಿರುವ ಭರವಸೆಗಳನ್ನ ಬೇಗ ಪೂರೈಸಲಿ. ಚನ್ನಪಟ್ಟಣದ ಬಿಜೆಪಿ ಕಾರ್ಯಕರ್ತರು ಸಹ ಅವರಿಗೆ ಬೆಂಬಲ ಕೊಡ್ತೀವಿ ಎಂದು ತಿಳಿಸಿದರು.

ಇನ್ನು ಹೆಚ್.ಡಿ.ಕೆ ಹಾಗೂ ಡಿ.ಕೆ.ಶಿ ನನ್ನ ರಾಜಕೀಯ ವೈರಿಗಳು. ಅವರನ್ನು ಎಂದಿಗೂ ಎದುರು ಹಾಕಿಕೊಳ್ತೀನಿ ಎಂದು ತೊಡೆತಟ್ಟಿದ್ದರು. ಕುಮಾರಸ್ವಾಮಿ ಅವರ ಕಣ್ಣೀರಿನ ಮುಂದೆ ನನ್ನ ನೀರಾವರಿ ಯೋಜನೆ ಕೊಚ್ಚಿಹೋಗಿದೆ. ನನಗೆ ಅಧಿಕಾರ ಮುಖ್ಯವಲ್ಲ. ನಾನು ಯಾವ ಚುನಾವಣೆಯಲ್ಲೂ ಹಿಂದೆ ಸರಿಯಲ್ಲ. ಹೆಚ್ಡಿಕೆ ಕುಟುಂಬದ ವಿರುದ್ಧ ಮೂರು ಚುನಾವಣೆ ಎದುರಿಸಿದ್ದೇನೆ ಎಂದು ಹೇಳಿದರು.

ಅನಿತಾ ಕುಮಾರಸ್ವಾಮಿ ಅವರನ್ನ ಸೋಲಿಸಿದ್ದೇನೆ. ಪಕ್ಷ ಸೂಚಿಸಿದರೆ ಮತ್ತೊಮ್ಮೆ ಚುನಾವಣೆಗೆ ನಿಲ್ಲಲ್ಲು ಸಿದ್ದ. ಪಕ್ಷದ ಆದೇಶಕ್ಕಾಗಿ ಕಾಯುತ್ತಿದ್ದೇನೆ. ರಾಮನಗರ ಉಪಚುನಾವಣೆಗೆ ಸ್ಪರ್ಧಿಸುವೆ ಎಂದು ಹೇಳಿದರು. ಇನ್ನು ಈ ಸರ್ಕಾರದ ಅವಧಿ ಕೇವಲ ಎಂ.ಪಿ. ಚುನಾವಣೆ ಅವರೆಗೆ ಮಾತ್ರ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಿದ್ದಲ್ಲಿ ಸರ್ಕಾರವನ್ನು ಹೆಸರಿಗಿಲ್ಲದ ಹಾಗೇ ಮಾಡಬೇಕು ಎಂದು ವ್ಯಂಗ್ಯವಾಡಿದರು.