City News Political

ಇಂದು ಕುಮಾರಸ್ವಾಮಿ ಭೇಟಿ ಮಾಡಲಿರುವ ಕಮಲ್ ಹಸನ್

ಬೆಂಗಳೂರು (ಜೂ.04): ನಟ, ರಾಜಕಾರಣಿ ಕಮಲ್ ಹಸನ್ ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲಿದ್ದಾರೆ.

ಇಂದು ಬೆಳಗ್ಗೆ 11.30ಕ್ಕೆ ಗೃಹ ಕಚೇರಿ ಕೃಷ್ಣಾದಲ್ಲಿ ಕುಮಾರಸ್ವಾಮಿ ಭೇಟಿ ಮಾಡಲಿರುವ ಕಮಲ್ ಹಾಸನ್ ಭೇಟಿ ಕುತೂಹಲ ಮೂಡಿಸಿದೆ.

ಕರ್ನಾಟಕದಲ್ಲಿ ತಮಿಳು ಚಿತ್ರ ಬಿಡುಗಡೆಗೆ ಅಡ್ಡಿ ವಿಚಾರ ಹಾಗೂ ಕಾವೇರಿ ನೀರು ನಿರ್ವಹಣಾ ಮಂಡಳಿ ವಿಚಾರವಾಗಿ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕುಮಾರಸ್ವಾಮಿ ಪ್ರಮಾಣ ವಚನ ಸಮಾರಂಭಕ್ಕೂ ಕಮಲ ಹಾಸನ್ ಬಂದಿದ್ದು, ತೃತೀಯ ರಂಗದ ಮುನ್ನುಡಿಗೆ ಬೆಂಬಲ ಸೂಚಿಸಿದ್ದರು..

Advertisements