Celebs City News Entertainment

ಮತದಾನದ ಬಗ್ಗೆ ಅರಿವು ಮೂಡಿಸಿದ ನಟಿ ಪ್ರಿಯಾಮಣಿ

ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಇದೀಗ ಸಿನಿಮಾ ತಾರೆಯರು ಕೂಡ ಮತದಾರರಿಗೆ ಮತದಾನದ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದಾರೆ. ಅದೇರೀತಿ ಬಹುಭಾಷಾ ನಟಿ ಪ್ರಿಯಾಮಣಿ ಕೂಡ ಇದೀಗ ಮತದಾನದ ಬಗ್ಗೆ ಮಾತನಾಡಿದ್ದಾರೆ.

‘ನಮ್ಮ ದೇಶದ ಅಭಿವೃದ್ಧಿಗಾಗಿ ಪ್ರತಿಯೊಬ್ಬರು ಮತದಾನ ಮಾಡಿ. ನಾವು ಯಾರಿಗೆ ಮತದಾನ ಮಾಡಿದರೂ, ಅದು ಜವಾಬ್ದಾರಿಯುತವಾಗಿರಬೇಕು. ನಮ್ಮ ಏರಿಯಾಗಳಿಗೆ ನಾಯಕರು ಭೇಟಿ ನೀಡುತ್ತಾರೆ ಎನ್ನುವ ಸಮಯದಲ್ಲಿ ನಮ್ಮ ಮನೆಯ ಮುಂದಿನ ರಸ್ತೆಗಳೆಲ್ಲ ಅಭಿವೃದ್ಧಿ ಕಾಣುತ್ತವೆ. ಅವು ಸಹ ಕೆಲವೇ ಸಮಯದಲ್ಲಿ ಹಾಳಾಗುತ್ತವೆ. ಈ ಅಭಿವೃದ್ಧಿ ಕಾರ್ಯಗಳನ್ನು ನಿರಂತರವಾಗಿ ಮಾಡುವಂತಹ ನಾಯಕರು ನಮಗೆ ಬೇಕು. ಅಂತವರನ್ನು ನಾವು ಆಯ್ಕೆ ಮಾಡಬೇಕು’ ಎಂದು ನಟಿ ಪ್ರಿಯಾಮಣಿ ಹೇಳಿದ್ದಾರೆ.

ಹಾಗೇ ‘ಮತದಾನ ಪ್ರತಿಯೊಬ್ಬ ನಾಗರೀಕನ ಹಕ್ಕು, ಆದರೆ ಮತದಾನವನ್ನು ಪ್ರಾಮಾಣಿಕ ವ್ಯಕ್ತಿಗೆ ಮಾತ್ರ ಮಾಡಿ ಎಂದು ಹೇಳುತ್ತೇನೆ. ಯಾರು ಕೆಲಸಗಳನ್ನು ಜವಬ್ದಾರಿಯುತವಾಗಿ ಮಾಡುತ್ತಾರೋ, ಅಂಥವರಿಗೆ ಮತದಾನ ಮಾಡಬೇಕು’ ಎಂದು ಅವರು ತಿಳಿಸಿದ್ದಾರೆ.

Advertisements