City News Political

ಒಟ್ ಮಾಡಿ ಬೆರಳು ತೋರಿದ್ರೆ ಸಾಕು ಕೈಗೆ ಗರಿಗರಿ ಮಸಾಲೆ ಬೆಣ್ಣೆ ದೋಸೆ ಫ್ರೀ…!

ಎಲೆಕ್ಷನ್ ಟೈಮಲ್ಲಿ ನಮ್ಮ ಪಾರ್ಟಿಗೆ ಓಟ್ ಹಾಕಿದ್ರೆ ಸೀರಿ ಕೊಡ್ತೀವಿ, ಮಿಕ್ಸಿ‌ ಕೊಡ್ತೀವಿ ಅನ್ನೋದು ಕಾಮನ್ ಬಿಡಿ.. ಆದ್ರೆ ಇಲ್ಲೊಂದು ಹೊಟೇಲ್ನಲ್ಲಿ ನೀವು‌ ಓಟ್ ಮಾಡಿದ್ರೆ ಸಾಕು ಕೈಗೆ ಗರಿಗರಿ ಮಸಾಲೆ ದೋಸೆ ಆ್ಯಂಡ್ ಬಿಸಿಬಿಸಿ ಕಾಫಿ ಕೊಡ್ತೀವಿ‌ ಅಂತಿದ್ದಾರೆ..ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಈಗಾಗಲೇ ಚುನಾವಣಾ ಆಯೋಗ ಸಾಕಷ್ಟು ಅಭಿಯಾನ,ಜಾಗೃತಿಗಳನ್ನು ಕೂಡ ನಡೆಸ್ತಿದೆ.. ಚುನಾವಣಾ ಆಯೋಗಕ್ಕೆ ಸಾಥ್ ನೀಡಲು ಅಂತ ಸಿಲಿಕಾನ್ ಸಿಟಿಯ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರಾಂಡ್ ಹೋಟೆಲ್ ಮಾಲೀಕರು ವಿಶೇಷವಾದ ಒಂದು ಆಫರನ್ನ ಘೋಷಸಿದ್ದಾರೆ.. 12 ತಾರೀಖು ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡುವ ಯುವ ಮತದಾರರಿಗೆ ಬಿಸಿಬಿಸಿ ಮಸಾಲೆ ದೋಸೆ ಹಾಗೂ ಬೆಂಗಳೂರಿನ 27 ವಿಧಾನಸಭಾ ಕ್ಷೇತ್ರದ ಮತದಾರರಿಗೆ ಉಚಿತವಾಗಿ ಬಿಸಿ ಬಿಸಿ ಫಿಲ್ಟರ್ ಕಾಫಿಯನ್ನ ಉಚಿತವಾಗಿ ನೀಡಲು ಮುಂದಾಗಿದ್ದಾರೆ..

ಮಾಲೀಕರನ್ನು ಏನ್ ಸಾರ್ ವಿಶೇಷ ಅಂದ್ರೆ ನಮ್ಮ ಹೋಟೆಲ್ ಗೆ ಸಾಕಷ್ಟು ‌ಕಾಲೇಜು‌ ವಿದ್ಯಾರ್ಥಿಗಳು ಬರುತ್ತಾರೆ.. ಅವರೆಲ್ಲರೂ ಕೂಡ ಮತದಾನದಿ‌ಂದ ಹಿಂದೆ ಉಳಿಯುವ ಮಾತುಗಳನ್ನು ಆಡುತ್ತಿದ್ದಾರೆ.. ಹಾಗಾಗಿ ಅವರನ್ನು ಮತದಾನ ಮಾಡುವಂತೆ ಪ್ರೇರೇಪಿಸಿಸಲು ಇದನ್ನು ‌ಮಾಡ್ತಿದ್ದೇವೆ ಅ‌ಂತಾರೇ…..ಇನ್ನು ಚುನಾವಣಾ ಸಮಯದಲ್ಲಿ ನಮ್ಮ ಪಾರ್ಟಿಗೆ ಓಟ್ ಮಾಡಿ ನಿಮಗೆ ಸ್ಯಾರಿ ಕೊಡ್ತೀವಿ.. ಮನಗೆ ಮಿಕ್ಸಿ‌ ಕೊಡ್ತೀವಿ ಅಂತ ಪುಂಗಿ ಬಿಡೋ ನಮ್ಮ ರಾಜಕಾರಣಿಗಳ ನಡುವೆ ನೀವು ಯಾವ ಪಕ್ಷಕ್ಕಾದ್ರು ಓಟ್ ಮಾಡಿ ಸಾಕು.. ನಿಮಗೆ ನಮ್ಮ ಆತಿಥ್ಯ ‌ಉಚಿತವಾಗಿ ನೀಡ್ತಿವಿ ಅಂತಿದ್ದಾರೆ.. ಇನ್ನು ನಿಸರ್ಗ ಗ್ರ್ಯಾಂಡ್ ನ ಈ ಆಫರ್ ಬಗ್ಗೆ ಹೊಟೇಲ್ ನ ಗ್ರಾಹಕರೊಬ್ಬರು, ಇವರ ಆತಿಥ್ಯಕ್ಕೆ ತುಂಬಾ ಖುಷಿಯಾಗಿದೆ ಅಂತ ತಮ್ಮ ಮೆಚ್ಚುಗೆಯ ನುಡಿಯನ್ನಾಡಿದ್ರು..ಒಟ್ನಲ್ಲಿ ಈ ಬಾರಿ ಪ್ರಪ್ರಥಮವಾಗಿ ವೋಟ್ ಮಾಡೋ ನ್ಯೂ ಒಟರ್ಸ್ಗಂತು ಮಸಾಲೆ ದೊಸೆ ಫಿಕ್ಸ್ ಆಗಿದೆ.. ಎಲ್ಲರೂ ತಪ್ಪದೆ ಓಟ್ ಮಾಡಿ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಮತದಾನದ ಪ್ರಮಾಣವನ್ನು ‌ಹೆಚ್ಚಿಸಿ..

~ ರಂಜಿತಾ ಗೌಡ ನ್ಯೂಸ್ ಇಂಡಿಯಾ ಬೆಂಗಳೂರು ~

Advertisements