City News Political

ಇದು ನನ್ನ ಕೊನೆಯ ಚುನಾವಣೆ ಸ್ಪರ್ಧೆ: ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಬಹಿರಂಗ ಪ್ರಚಾರ ನಿನ್ನೆ ಅಂತ್ಯಗೊಂಡಿದ್ದು, ಇಂದು ಮನೆಮನೆಗೆ ತೆರಳಿ ಪ್ರಚಾರ, ಪೂರ್ವ ದಾಖಲು ಆಡಿಯೊ ಸಂದೇಶಗಳ ಮೂಲಕ ಮಾತ್ರ ಪ್ರಚಾರ ನಡೆಸಲು ಅವಕಾಶವಿದೆ.

ನಿನ್ನೆ ತಮ್ಮ ಪೂರ್ವ ದಾಖಲು ಧ್ವನಿ ಸಂದೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಾರಿಯ ಚುನಾವಣೆ ತಮ್ಮ ಕಡೆಯ ಸ್ಪರ್ಧೆಯಾಗಿದ್ದು, ನಾನು ಪ್ರತಿನಿಧಿಸುತ್ತಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿಪರ ಕೆಲಸಗಳನ್ನು ಮಾಡಿದ್ದೇನೆ, ನನಗೆ ಮತ ನೀಡಿ ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಳ್ಳುವುದು ಮತದಾರರ ಮೊಬೈಲ್ ಗಳಿಗೆ ಬರುತ್ತಿದ್ದವು.

ಇನ್ನೊಂದು ವಿಷಯವೆಂದರೆ ಚಾಮುಂಡೇಶ್ವರಿ ಕ್ಷೇತ್ರದ ಮತದಾರರಲ್ಲದ ಬೆಂಗಳೂರಿನ ನಿವಾಸಿಗಳ ಮೊಬೈಲ್ ಗಳಿಗೆ ಕೂಡ ಈ ಸಂದೇಶ ಬರುತ್ತಿದ್ದವು. ಜನರಿಗೆ ನೀಡಿದ್ದ ಭರವಸೆಗಳನ್ನು ಕಾಂಗ್ರೆಸ್ ಕಳೆದ 5 ವರ್ಷಗಳ ಆಡಳಿತದಲ್ಲಿ ಈಡೇರಿಸಿದೆ ಎಂಬ ಸಂದೇಶಗಳು ಕೂಡ ಬರುತ್ತಿದ್ದವು

Advertisements