Entertainment Movies Celebs

ನಾ ಪೇರು ಸೂರ್ಯ : ಮೊದಲ ದಿನವೇ 40 ಕೋಟಿ

ಅಲ್ಲು ಅರ್ಜುನ್ ಹೀರೊ ಆಗಿರುವ ತಾಜಾ ಚಿತ್ರ ನಾ ಪೇರು ಸೂರ್ಯ ನಾ ಇಲ್ಲು ಇಂಡಿಯಾ. ಈ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಸೈನಿಕನಾಗಿ ಕಾಣಿಸುತ್ತಾನೆ. ಈ ಸಿನಿಮಾ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಿದೆ. ಇದು ಅಲ್ಲು ಅರ್ಜುನ್ ಕೆರೆಯರ್ ನಲ್ಲೇ ಬಿಗ್ಗೆಸ್ಟ್ ಓಪನಿಂಗ್ ಸಿನಿಮಾ.

ನಾ ಪೇರು ಸೂರ್ಯ ನಾ ಇಲ್ಲು ಇಂಡಿಯಾ ಸಿನಿಮಾ ಮೊದಲ ದಿನವೇ 40ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಈ ಸಿನಿಮಾ ದಾಖಲೆ ಸೃಷ್ಟಿಸಿದೆ.

ಅನು ಇಮ್ಮಾನ್ಯೂಲ್ ಚಿತ್ರದ ನಾಯಕಿ. ಪಾತ್ರವರ್ಗದಲ್ಲಿ ಶರತ್ ಕುಮಾರ್, ಅರ್ಜುನ್, ಬೊಮನ್ ಇರಾನಿ, ರವೂ ರಮೇಶ್, ನದಿಯಾ ಮುಖ್ಯ ಪಾತ್ರಗಳಲಿದ್ದಾರೆ. ತುಂಬಾ ಗ್ಯಾಪ್ ಬಳಿಕ ಮೆಗಾ ಬ್ರದರ್ ನಾಗಬಾಬು ಸಮರ್ಪಣೆಯಲ್ಲಿ ಈ ಸಿನಿಮಾ ಮೂಡಿಬಂದಿದೆ.

ಬಿ.ಎಸ್.ಎಫ್ ನಲ್ಲಿ ಕೆಲಸ ಮಾಡಿಕೊಂಡು, ಬಾರ್ಡರ್ ಗೆ ಹೋಗಿ ಶತ್ರುಗಳ ಜೊತೆ ಹೊರಡಬೇಕು ಎಂಬ ಆಸೆ ಈ ಚಿತ್ರದ ನಾಯಕನಿಗೆ ಇರುತ್ತದೆ. ಬಾರ್ಡರ್ ಗೆ ಹೋಗುವುದೇ ನನ್ನ ಗುರಿ ಎಂದು ನಾಯಕ ಅವನ ಗಾಡ್ ಫಾದರ್ ಗೆ ಹೇಳುತ್ತಾನೆ. ಯಾಕೆ ಅಲ್ಲಿಗೆ ಹೋಗಬೇಕು ಎಂದು ಕೇಳಿದಾಗ, ಲ್ಯಾನ್ಸ್ ನಾಯಕ್ ಹನುಮಂತಪ್ಪ ಬಗ್ಗೆ ಅಲ್ಲು ಅರ್ಜುನ್ ಮಾತನಾಡುತ್ತಾರೆ.

ಹನುಮಂತಪ್ಪ ನಮಗೆಲ್ಲ ಮಾದರಿ, ಅಷ್ಟು ದಿನಗಳ ಕಾಲ ಕೊರೆಯುವ ಚಳಿಯಲ್ಲಿ ಬದುಕಿದ್ದರು, ಅವರ ಜಗದಲ್ಲೂ ನಾನು ಇರಬೇಕಿತ್ತು ಎಂದು ನನಗೆ ಆಗಾಗ ಅನ್ನಿಸುತ್ತದೆ, ಹನುಮಂತಪ್ಪ ಸಲಾಮ್ ಎಂದು ನಾಯಕ ಅಲ್ಲು ಅರ್ಜುನ್ ಹೇಳುತ್ತಾರೆ. ಈ ಮೂಲಕ ಸೈನ್ಯದ ಕಥೆ ಹೇಳಿರುವ ನಿರ್ದೇಶಕ ವಕ್ಕಂತಮ್ ವಂಶಿ, ಕನ್ನಡಿಗ ಹನುಮಂತಪ್ಪ ಗೌರವ ಸಲ್ಲಿಸಿರುವುದು ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ..

Advertisements