City News Political

ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯನ್ನ ಭೇಟಿಯಾದ ಅಂಬರೀಷ್

ಬೆಂಗಳೂರು: ಕಾಂಗ್ರೆಸ್ ಟಿಕೆಟ್ ಸಿಕ್ಕಿದರೂ ಚುನಾವಣೆಗೆ ಸ್ಪರ್ದಿಸಲು ನಿರಾಸಕ್ತಿ ತೋರಿಸಿದ್ದು ಮತ್ತು ಕಾಂಗ್ರೆಸ್ ನಾಯಕರ ಕೈಗೆ ಸಿಗದೆ ಇದ್ದ ಅಂಬರೀಷ್ ಅವರು ಭಾನುವಾರ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಕಾಂಗ್ರೆಸ್ ಮಟ್ಟಿಗೆ ಅಕ್ಷರಶಃ ‘ರೇಬಲ್’ ಸ್ಟಾರ್ ಆಗಿರುವ ಅಂಬರೀಶ್, ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ದಿಸಲಾರೆ ಎಂದು ಹಿಂದೆ ಸರಿದಿದ್ದರು.

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಅಂಬಿ ಅಪಾರ್ಟ್ಮೆಂಟ್ ನಲ್ಲಿ ಮಾಜಿ ಸಚಿವ ಅಂಬರೀಷ್ ಅವರನ್ನ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಡಿಸಿ ತಮ್ಮಣ್ಣ ಅವರ ಪುತ್ರ ಹಾಗೂ ಶರವಣ ಕೂಡ ಉಪಸ್ಥಿತರಿದ್ದರು.

ಈ ಭೇಟಿಯು ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಈ ಭೇಟಿಯು ಯಾವ ಸ್ವರೂಪ ಪಡೆದುಕೊಳ್ಳುವುದು ಎಂದು ಕಾದುನೋಡಬೇಕಿದೆ..

Advertisements