Bollywood Celebs

ಕೃಷ್ಣಮೃಗ ಭೇಟೆ ಪ್ರಕರಣ: ಇಂದು ಸಲ್ಮಾನ್ ಖಾನ್ ಅರ್ಜಿಯ ಭವಿಷ್ಯ ನಿರ್ಧಾರ

ಜೋಧ್ ಪುರ್: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜಮೀನ ಮೇಲೆ ಹೊರಬಂದಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಇಂದು ಮತ್ತೆ ವಿಚಾರಣೆಗೆ ಜೋಧ್ ಪುರ್ ಕೋರ್ಟ್ ಗೆ ಹಾಜರಾಗಲಿದ್ದಾರೆ.

ಕಳೆದ ಏಪ್ರಿಲ್ 6 ರಂದು 20 ವರ್ಷಗಳ ಹಿಂದಿನ ಕೃಷ್ಣ ಮೃಗ ಭೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ದೋಷಿ ಎಂದು ತೀರ್ಪು ನೀಡಿ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿತ್ತು. ಎರಡು ದಿನಗಳ ಸೆರೆವಾಸ ಅನುಭವಿಸಿದ್ದ ಸಲ್ಮಾನ್, ಬಳಿಕ ಜಮೀನು ಪಡೆದಿದ್ದರು.

ಈ ತೀರ್ಪು ಪ್ರಶ್ನಿಸಿ ಸಲ್ಮಾನ್ ಖಾನ್ ಪರ ವಕೀಲರು ಮೇಲ್ಮನವಿ ಸಲ್ಲಿಸಿದರು. ಸಲ್ಮಾನ್ ಖಾನ್ ಮೇಲಿನ ಆರೋಪಗಳನ್ನು ಕೈಬಿಡುವಂತೆ ಕೋರಿದ್ದಾರೆ. ಈ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ..

Advertisements