Bollywood Celebs Entertainment

ಮೇ 8ಕ್ಕೆ ನಟಿ ಸೋನಂ ಕಪೂರ್- ಆನಂದ್ ವಿವಾಹ, ವೈರಲ್ ಆಯ್ತು ಸೋನಂ ಕಪೂರ್ ಮದ್ವೆಯ ಆಮಂತ್ರಣ ಪತ್ರಿಕೆ

ಮುಂಬೈ: ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ, ನಟಿ ಶ್ರೀಯಾ ಸರಣ್, ಮಾಡೆಲ್ ಮಿಲಿಂದ್ ಸೋಮನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಬಾಲಿವುಡ್ ನಟಿ ಸೋನಂ ಕಪೂರ್ ಕೊಡ ವೈವಾಹಿಕ ಬದುಕಿಗೆ ಅಡಿಯಿಡಲಿದ್ದಾರೆ.
ಉದ್ಯಮಿ ಆನಂದ್ ಅಹುಜಾ ಜೊತೆಗೆ ಸೋನಂ ಕಪೂರ್ ವಿವಾಹ ಸಧ್ಯದಲ್ಲೇ ನಡೆಯಲಿದೆ ಎಂದು ಗುಸುಗುಸು ಬಾಲಿವುಡ್ ಅಂಗಳದಲ್ಲಿ ಅನೇಕ ದಿನಗಳಿಂದ ಕೇಳಿಬರುತ್ತಲೇ ಇತ್ತು. ಈಗ ಈ ಸುದ್ದಿ ಅಧಿಕೃತವಾಗಿದೆ.

ಬಾಲಿವುಡ್ ಬೆಡಗಿ ಸೋನಂ ಕಪೂರ್ ಮತ್ತು ಆನಂದ್ ಅಹುಜಾ ಅವರ ವಿವಾಹದ ಮೂಹೂರ್ತ ಕೊನೆಗೂ ಫಿಕ್ಸ್ ಆಗಿದೆ. ಮೇ 8ರಂದು ಅವರ ಮದುವೆ ಮುಂಬೈನಲ್ಲೇ ನಡೆಯುವುದೂ ಖಚಿತವಾಗಿದೆ. ಈ ಜೋಡಿಯ ಮದುವೆಯ ದಿನಾಂಕ ಮತ್ತು ಸ್ಥಳದ ಬಗ್ಗೆ ಎರಡೂ ಮೂರು ತಿಂಗಳಿಂದಲೂ ನಡೆಯುತ್ತಿದ್ದ ಊಹಾಪೋಹ, ಚರ್ಚೆಗಳಿಗೆ ತೆರೆಬಿದ್ದಿದೆ.

ಮೇ 8ರಂದು ಮದುವೆಗೆ ಮೂಹೂರ್ತ ನಿಗದಿಪಡಿಸಲಾಗಿದೆ ಎಂದು ಅಧಿಕೃತವಾಗಿ ಕಪೂರ್ ಕುಟುಂಬ ಪ್ರಕಟಿಸಿದೆ.

ಈಗಾಗಲೇ ಮದುವೆಗೆ ಸಿದ್ಧತೆ ನಡೆಸಲಾಗುತ್ತಿದ್ದು, ಮುಂಬೈನಲ್ಲಿ ಸರಳವಾಗಿ ವಿವಾಹ ಕಾರ್ಯಕ್ರಮ ಅಯೋಜಿಸಲಾಗುವುದು. ಖಾಸಗಿ ಕಾರ್ಯಕ್ರಮದಂತೆ ಮದುವೆ ಸಮಾರಂಭ ನಡೆಯಲಿದ್ದು, ನಮ್ಮ ಕುಟುಂಬದ ಖಾಸಗಿ ವಿಚಾರಗಳಿಗೆ ಯಾವುದೇ ಭಂಗ ತರಬೇಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಸಾಮಾನ್ಯವಾಗಿ ಬಾಲಿವುಡ್ ಸಿನಿ ತಾರೆಯರು ಅದ್ದೂರಿಯಾಗಿ ಮದುವೆ ಸಮಾರಂಭಗಳನ್ನು ಆಯೋಜಿಸಿ, ದುಂದು ವೆಚ್ಚ ಮಾಡಿ ಮದುವೆ ಮಾಡೋಕೋಳ್ಳುವುದು ನನಗೆ ಇಷ್ಟವಿಲ್ಲ. ಕುಟುಂಬದ ಸದಸ್ಯರು, ಸ್ನೇಹಿತರು ಹಿತೈಷಿಗಳ ಸಮುಖದಲ್ಲಿ ಸರಳವಾಗಿ ವಿವಾಹ ಮಾಡಿಕೊಳ್ಳುವುದು ಇಷ್ಟ ಎಂದು ಹೇಳಿದ್ದರು.

ಆನಂದ್ ಅಹುಜಾ ದೆಹಲಿಯ ಉದ್ಯಮಿಯೊಬ್ಬರ ಪುತ್ರ. ಷಾಪಿ ಎಕ್ಸ್ಪೋರ್ಟ್ ಇಂಡಿಯಾ ಎಂಬ ರಫ್ತು ಸಂಸ್ಥೆಯ ಮಾಲೀಕ. ಸುಮಾರು 3,000 ರೂ ಕೋಟಿ ಆಸ್ತಿಯ ಒಡೆಯ ಆನಂದ್. ತಮ್ಮ ಸ್ನೇಹಿತನ ಮೂಲಕ ಪರಿಚಯವಾಗಿದ್ದ ಸೋನಂ ಅವರಿಗೆ ಆನಂದ್ ಅವರೇ ಪ್ರೀತಿ ಮತ್ತು ಮದುವೆಯ ಆಫರ್ ಮಾಡಿದ್ದರು.

ಇನ್ನು ಮೇ 7ರಂದು ಮೆಹೆಂದಿ ಕಾರ್ಯಕ್ರಮ, ಮೇ 8ರಂದು ಮದುವೆ ಮತ್ತು ಪಾರ್ಟಿ ಆಯೋಜಿಸಲಾಗಿದೆ. ಆಹ್ವಾನಿತರಿಗೆ ಕಾರಿನ ಸ್ಟಿಕ್ಕರ್ ಸಹ ಕಳುಹಿಸಿಕೊಡಲಾಗಿದೆ. ಮೂರು ದಿನಗಳ ಕಾರ್ಯಕ್ರಮದ ಡ್ರೆಸ್ ಕೋಡ್ ನ ವಿವರಗಳನ್ನು ಉಲ್ಲೇಖ ಮಾಡಲಾಗಿದೆ.

ಇದೇ ವೇಳೆ ವೈರಲ್ ಆಗಿರುವ ಆಮಂತ್ರಣ ಪತ್ರಿಕೆಯು ಇ-ಇನ್ವೆಟ್ ಆಗಿದ್ದು ಆತ್ಮೀಯರಿಗೆ ಮಾತ್ರ ನೀಡಲಾಗಿದೆಯಂತೆ ಈ ಮೂಲಕ ಸೋನಂ ಮತ್ತು ಆನಂದ್ ಪರಿಸರ ಕಾಳಜಿ ಮೆರೆದಿದ್ದಾರೆ..

Advertisements