Celebs City News Entertainment

Chiranjeevi Sarja Meghana Raj Marriage: ಚಿರು ಬಾಳಲ್ಲಿ ಮೇಘ ಬಂತು ಮೇಘ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಿರು ಮೇಘನಾ

ಬೆಂಗಳೂರು: ಕನ್ನಡ ಚಿತ್ರರಂಗದ ಯುವ ಜೋಡಿ ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ವಿವಾಹ. ಏಪ್ರಿಲ್ 29ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದು ನಿಮಗೆಲ್ಲ ತಿಳಿದಿದೆ. ಈ ಜೋಡಿ ಈಗ ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಲಿಟ್ಟಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಬುಧವಾರ ನಡೆದ ಅದ್ದೂರಿ ಮದುವೆ ಕಾರ್ಯಕ್ರಮದಲ್ಲಿ ಬೆಳಗ್ಗೆ 10:30 ರಿಂದ 11ಕ್ಕೆ ನಡೆದ ಮಿಥುನ ಲಗ್ನದಲ್ಲಿ ಇವರಿಬ್ಬರೂ ಸಂಸಾರ ಜೀವನಕ್ಕೆ ಕಾಲಿಟ್ಟರು. ಇದೆ ವೇಳೆ ಚಿತ್ರೋದ್ಯಮದ ಗಣ್ಯರು ಸೇರಿದಂತೆ ಅರ್ಜುನ್ ಸರ್ಜಾ ಕುಟುಂಬ, ನಟ ಶ್ರೀನಾಥ್, ನಟ ಪುನೀತ್ ರಾಜಕುಮಾರ್, ಹಿರಿಯ ನಟಿ ಜಯಂತಿ, ನಟ ಚಂದನ್ ಸೇರಿದಂತೆ ಹಲವು ಗಣ್ಯರು ಸ್ನೇಹಿತರು ಕುಟುಂಬಸ್ಥರು ವಧುವರರಿಗೆ ಹಾರೈಸಿದರು.

‘ಆಟಗಾರ’ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದ ಈ ಜೋಡಿ, ಬಹುಕಾಲ ಸ್ನೇಹಿತರಾಗಿದ್ದರು. 2017ರ ಅಕ್ಟೋಬರ್ ನಲ್ಲಿ ಈ ಜೋಡಿಯ ನಿಶ್ಚಿತಾರ್ಥ ನೆರವೇರಿತ್ತು.

ಮೇಘನಾ ಚಿತ್ರರಂಗ ಪ್ರವೇಶಿಸಿದ್ದು ಮಲಯಾಳಂ ಸಿನಿಮಾದ ಮೂಲಕ. ಬಳಿಕ ತಮಿಳು, ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ…

Advertisements