Celebs City News Political

ಎಂಇಪಿ ಪ್ರಚಾರಕ್ಕೆ ಬಾಲಿವುಡ್ ತಾರಾ ಮೆರಗು

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾದ ಎಂಇಪಿ ಪ್ರಚಾರಕ್ಕೆ ಬಾಲಿವುಡ್ ಹಾಗೂ ಸ್ಥಳೀಯ ಟಿವಿ ತಾರೆಯರ ದಂಡೆ ಟೊಂಕ ಕಟ್ಟಿ ನಿಂತಿದೆ.ಬೆಂಗಳೂರಿನ ವಿವಿಧ ಬಡಾವಣೆಗಳಾದ ಕೆ.ಆರ್.ಪುರಂ, ರಾಮಮೂರ್ತಿನಗರ, ಸಿವಿ ರಾಮನಗರ ಮೊದಲಾದ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇಂದು ಬಾಲಿವುಡ್ ಸ್ಟಾರ್ ಗಳಾದ ಸೋನು ಸೂದ್ , ಏಜಾಜ್ ಖಾನ್, ಅರ್ಬಾಜ್ ಖಾನ್ ಹಾಗೂ ಸೊಹೆಲ್ ಖಾನ್ ರೋಡ್ ಶೋ ಮೂಲಕ ಎಂಇಪಿ ಪರ ಮತಯಾಚಿಸಿದರು. ಎಂಇಪಿ ಕಾರ್ಯಕರ್ತರ ಉತ್ಸಾಹ ಮುಗಿಲುಮಟ್ಟಿತು. ಎಲ್ಲೆಡೆ ವಜ್ರದ ಚಿನ್ಹೆ ಬಾವುಟಗಳು ರಾರಾಜಿಸುತ್ತಿದ್ದವು.ಕನ್ನಡ ಕಿರುತೆರೆಯ ಅನೇಕ ಕಲಾವಿದರು ನೌಹೀರಾ ಶೇಕ್ ಅವರಿಗೆ ಬೆಂಬಲ ನೀಡಿದರು. ಜತೆಗೆ ಎಂಇಪಿ ಪರವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.*ಡಾ.ನೌಹೀರಾ ಶೇಕ್ ಹೇಳಿದ್ದೇನು?*ಕಾಂಗ್ರೆಸ್ ಮತ್ತು ಬಿಜೆಪಿ ಬಿಟ್ಟು ಬೇರೆ ಪಕ್ಷದ ನಾಯಕರು ದೇಶವನ್ನು ಆಳಬಹುದು ಎಂಬುದನ್ನು ಸಾಧಿಸಿ ತೋರಿಸುವುದೆ ಎಂಇಪಿಯ ಮುಖ್ಯ ಗುರಿ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ.ನೊಹೀರಾ ಶೇಕ್ ಹೇಳಿದ್ದಾರೆ. ಕಾಂಗ್ರೆಸ್-ಬಿಜೆಪಿ ಬಿಟ್ಟರೇ ದೇಶ ಆಳ್ವಿಕೆ ಮಾಡಲು ಬೇರೆಯವರಿಂದ ಸಾಧ್ಯವಿಲ್ಲ ಎಂಬ ತಪ್ಪು ಕಲ್ಪನೆ ಜನರಲ್ಲಿ ಮೂಡಿದೆ ಇದನ್ನು ಬದಲಾವಣೆ ಮಾಡಿ ರಾಜಕೀಯದಲ್ಲಿ ಹೊಸ ಶಕೆ ಆರಂಭಿಸುವುದೇ ನನ್ನ ಸಂಕಲ್ಪ.ಅಧಿಕಾರಕ್ಕಾಗಿ ಪರಸ್ಪರ ಆರೋಪ-ಪ್ರತ್ಯಾರೋಪ ಮತ್ತು ಸೇಡಿನ ರಾಜಕೀಯದಲ್ಲಿ ಮುಳುಗಿರುವ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಯಾವ ಒಳ್ಳೆಯ ಕೆಲಸ ನಿರೀಕ್ಷೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ನೊಂದವರಿಗೆ ನ್ಯಾಯ ಕೊಡಿಸಬೇಕು ಮತ್ತು ಉತ್ತಮ ಆಡಳಿತಕ್ಕಾಗಿ ಪರ್ಯಾಯ ಪಕ್ಷ ಕಟ್ಟಿದ್ದೇನೆ ಗುರಿಮುಟ್ಟುವ ತನಕ ಹೋರಾಟ ಮಾಡುತ್ತೇನೆ. ಸೋಲು-ಗೆಲುವು ನನಗೆ ಮುಖ್ಯವಲ್ಲ ಜನರ ಸೇವೆ ಮಾಡೋದು ನನ್ನ ಗುರಿ.ದೇಶದ ಜನಸಂಖ್ಯೆಯಲ್ಲಿ ಶೇ.50ರಷ್ಟು ಮಹಿಳೆಯರಿದ್ದಾರೆ. ಅವರಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರೆಯುತ್ತಿಲ್ಲ ಹೀಗಾಗಿ ಬದಲಾವಣೆಗೆ ಯಾರಾದರೂ ಚಾಲನೆ ಕೊಡಬೇಕಾಗಿದೆ ಎಂದು ಮನಗಂಡು ಈ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದೇನೆ.ಕಾಂಗ್ರೆಸ್ -ಬಿಜೆಪಿ ಅಭ್ಯರ್ಥಿಗಳ ಪಟ್ಟಿ ನೋಡಿದರೇ ಬೆರಳೆಣಿಕೆಯಷ್ಟು ಮಹಿಳೆಯರು ಕಾಣ ಸಿಗುವುದಿಲ್ಲ. ದುಡ್ಡು ಇದ್ದವರಿಗೆ ನಾವು ಟಿಕೆಟ್ ನೀಡಿಲ್ಲ ನಿಷ್ಠೆ, ಸೇವೆ ಹಾಗೂ ಪ್ರಾಮಾಣಿಕತೆ ಇರುವವರನ್ನು ಗುರುತಿಸಿ, ನಿರೀಕ್ಷೆ ಮಾಡದೇ ಇರುವವರಿಗೂ ಟಿಕೆಟ್ ನೀಡಿದ್ದೇನೆ. ರಾಜಕೀಯಕ್ಕೆ ಕರೆತಂದಿದ್ದೇನೆ. ನಾನು ಯಾವುದೇ ನಾಯಕನ ಕೈಗೊಂಬೆಯಲ್ಲ ಭಾರತೀಯರ ಅಚಲ ನಂಬಿಕೆ, ವಿಶ್ವಾಸದ ಮೇಲೆ ಭರವಸೆ ಇಟ್ಟು ಪಕ್ಷ ಕಟ್ಟಿದ್ದೇನೆ, ಸೋಲು-ಗೆಲುವು ನನ್ನ ಆತ್ಮವಿಶ್ವಾಸವನ್ನು ಎಂದೂ ಕುಂದಿಸುವುದಿಲ್ಲ. ನನ್ನ ಕೊನೆಯುಸಿರು ಇರುವ ತನಕ ನೊಂದವರಿಗೆ ನ್ಯಾಯ ಕೊಡಿಸುವವರೆಗೂ ನನ್ನ ಹೋರಾಟ ಕೈಬಿಡುವುದಿಲ್ಲ. ನನ್ನ ಸಮಾಜ ಸೇವೆ ಮತ್ತು ಒಳ್ಳೆಯ ಕೆಲಸ ನೋಡಿ ಬಾಲಿವುಡ್ ನಟರು ತಾವಾಗಿಯೇ ಪ್ರಚಾರಕ್ಕೆ ಬಂದಿದ್ದಾರೆ ಎಂದು ಸ್ಪಷ್ಟಪಡಿಸಿದರು.*ನಟ ಸೋನು ಸೂದ್ ಹೇಳಿದಿಷ್ಟು?*ಡಾ.ನೊಹೀರಾ ಶೇಕ್ ಸಮಾಜ ಸೇವೆ ಬಗ್ಗೆ ತಿಳಿದಿಕೊಂಡಿದ್ದೇನೆ. ರಾಜಕೀಯಕ್ಕೆ ಬರುವವರಿಗೆ ಜನರ ಸೇವೆಯೇ ಮುಖ್ಯ ಗುರಿಯಾಗಿರಬೇಕು. ಹಣ ಗಳಿಸುವ ಉದ್ದೇಶದಿಂದ ರಾಜಕೀಯಕ್ಕೆ ಬಂದಿಲ್ಲ ಎಂಇಪಿ ಪಕ್ಷದ ನೀತಿ, ನಿಯಮ, ಕಾರ್ಯಕ್ರಮಗಳು ಜನರಿಗೆ ಇಷ್ಟವಾಗಿದೆ, ನನಗೂ ಇಷ್ಟವಾಗಿದೆ ಹೀಗಾಗಿ ನೊಹೀರಾ ಶೇಕ್ ಕೈ ಬಲಪಡಿಸಲು ಪ್ರಚಾರ ಮಾಡುತ್ತಿದ್ದೇನೆ ಎಂದರು.*ನಟ ಏಜಾಜ್ ಖಾನ್ ಹೇಳಿದ್ದೇನೆ?*ಎಂಇಪಿ ವಿಭಿನ್ನವಾದ ಪಕ್ಷ, ಕಾಂಗ್ರೆಸ್ ಮತ್ತು ಬಿಜೆಪಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ನೌಹೀರಾ ಶೇಕ್ ಅವರ ಸಮಾಜ ಸೇವೆ ದಿಟ್ಟ ಹೋರಾಟ ಮೆಚ್ಚಿಕೊಂಡು ಪಕ್ಷದ ಬೆಂಬಲಕ್ಕೆ ನಿಂತು ಪ್ರಚಾರ ಮಾಡುತ್ತಿದ್ದೇನೆ ಎಂದರು