Political

ಪ್ರಧಾನಿ ಮೋದಿ ಸಭೆಗೆ ಜನಸಾಗರ: ಮುಗಿಲು ಮುಟ್ಟಿದೆ ಜೈಕಾರ

ಚಿಕ್ಕೋಡಿ: ಮೈದಾನದ ತುಂಬ ಲಕ್ಷಾಂತರ ಸಂಖ್ಯೆಯಲ್ಲಿ ಕಿಕ್ಕಿರಿದು ಸರಿದ್ದ ಜನಸಾಗರದಿಂದ ತೇಲಿ ಬರುತ್ತಿದ್ದ ಮೋದಿ…ಮೋದಿ…ಉದ್ಘೋಷ. ಮೋದಿ ಭಾಷಣ ಮುಗಿಯುತ್ತಿದ್ದಾಗಲೂ ಹರಿದು ಬರೀತಿದ್ದ ಜನಸಾಗರ. ಮಧ್ಯಾಹ್ನದಿಂದಲೇ ಜಿಲ್ಲೆಯ ನಾನಾ ಕಡೆಗಳಿಂದ ವಾಹನಗಳ ಮೂಲಕ ಹರಿದು ಬರಿತ್ತಿದ್ದ ಜನಸಾಗರದಿಂದ ಉಂಟಾದ ಟ್ರಾಫಿಕ್ ಕಿರಿಕಿರಿ. ಸಭೆಯ ಮೈದಾನದ ಸುತ್ತಲೂ ಬಿಗಿ ಪೊಲೀಸ್ ಬಂದುಬಸ್ತ್. ಬಿಸಿಲಿನಿಂದ ಬಾಯರಿ ಬಂದ ಕಾರ್ಯಕರ್ತರಿಗೆ ನೀರು, ಮಜ್ಜಿಗೆ ವಿತರಣೆ..!

ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಚಿಕ್ಕೋಡಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪ್ರಚಾರಾರ್ಥ ಹಮ್ಮಿಕೊಂಡಿದ್ದ ಕರುನಾಡ ಜಾಗೃತಿ ಯಾತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಸಭೆಯಲ್ಲಿ ಕಂಡು ಬಂದ ದೃಶ್ಯಗಳು.

ಮಧ್ಯಾಹ್ನ ಮೂರು ಗಂಟೆಯಿಂದಲೇ ಮೈದಾನದತ್ತ ಜನಸಾಗರ ಹರಿದು ಬರುತಿತ್ತು. ಬಿಗಿ ಪೊಲೀಸ್ ಭದ್ರತೆಯಿಂದಾಗಿ ಜನರು ಸಾಲುಗಟ್ಟಿ ಮೈದಾನದೊಳಗೆ ಅಗಮಿಸಲು ಪರದಾಡಿದರು. ಕಾರ್ಯಕರ್ತರಿಗೆ ಅಲ್ಲಲ್ಲಿ ಮಜ್ಜಿಗೆ, ಕುಡಿಯುವ ನೀರು ವಿತರಿಸುತ್ತಿದ್ದ ದೃಶ್ಯ ಕಂಡು ಬಂದಿತು..

Advertisements