City News Political

Huccha Venkat Gets His Favorite Symbol From Election Commission ಹುಚ್ಚ ವೆಂಕಟ್ ಗೆ ಎಕ್ಕಡ ಚಿಹ್ನೆ…!

ಎಲ್. ವೆಂಕಟ್ ರಾಮ್ ಅಲಿಯಾಸ್ ಹುಚ್ಚ ವೆಂಕಟ್ ರಾಜರಾಜೇಶ್ವರಿ ನಗರದ ಕ್ಷೇತ್ರದಿಂದ ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ದಿಸುತ್ತಿದ್ದಾರೆ.

‘ನನ್ ಮಗಂದ್, ನನ್ ಎಕ್ಕಡ’ ಎಂಬ ಡೈಲಾಗ್ ಖ್ಯಾತಿಯ ನಟ ಹುಚ್ಚ ವೆಂಕಟ್ ಗೆ ಎಕ್ಕಡ(ಚಪ್ಪಲಿ) ಯನ್ನ ಚಿಹ್ನೆಯಾಗಿ ಚುನಾವಣಾ ಆಯೋಗ ನೀಡಿದೆ.

ಮತದಾರರಿಗೆ ಕುಕ್ಕರ್, ನೀರಿನ ಕ್ಯಾನ್ ಹಂಚುವ ಮೂಲಕ ರಾಜರಾಜೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಮುನಿರತ್ನ ವಿರುದ್ಧವೇ ಚುನಾವಣಾ ಅಖಾಡಕ್ಕೆ ಇಳಿದಿದ್ದು ರಾಜಕೀಯ ಕುತೂಹಲ ಸೃಷ್ಟಿಸಿದ್ದಾರೆ.

ಮಾತಿಗೆ ಮುಂಚೆ ‘ನನ್ ಎಕ್ಕಡ’ ಎನ್ನುವ ವೆಂಕಟ್ ಗೆ, ಅದೇ ಚಿಹ್ನೆ ಸಿಕ್ಕಿರುವ ಸಾಮಾಜಿಕ ಜಾಲತಾಣಗಳಲ್ಲಿ ಸ್ವಾರಸ್ಯಕರ ಚರ್ಚೆಯನ್ನು ಹುಟ್ಟುಹಾಕಿದೆ.

‘ಆಯೋಗ ಹುಡುಕಿ ಹುಡುಕಿ ಚಪ್ಪಲಿಯ ಚಿಹ್ನೆಯನ್ನೇ ಕೊಟ್ಟಿದೆ. ವೆಂಕಟ್ ಅವರು ಪ್ರಚಾರಕ್ಕೆ ಹೋದಾಗ, ‘ನನ್ ಎಕ್ಕಡಕ್ಕೆ ಮತ ಹಾಕಿ’ ಎಂದು ಮತಯಾಚಿಸಬಹುದು ಎಂದು ಪ್ರದೀಪ್ ಎಂಬುವವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಜೊತೆ ಮಾತನಾಡಿದ ವೆಂಕಟ್, ‘ಚಪ್ಪಲಿ ಚಿಹ್ನೆ ನೀಡುವಂತೆ ನಾನೇ ಚುನಾವಣಾ ಆಯೋಗವನ್ನು ಕೇಳಿಕೊಂಡಿದ್ದೆ’ ಎಂದರು.

ನಮ್ಮ ಅಪ್ಪನಿಗೆ ನಾನು ಚಪ್ಪಲಿ ಕೊಡಿಸಿದ್ದೆ. ನನ್ನ ತಂದೆಗೆ ನಾನು ಯಾವತ್ತೂ ಚಪ್ಪಲಿ ಸಮಾನ ಎಂದು ರಾಜರಾಜೇಶ್ವರಿ ನಗರದಲ್ಲಿ ಪಕ್ಷೇತರ ಅಭ್ಯರ್ಥಿ ಹೇಳಿಕೊಂಡಿದ್ದಾರೆ.

Advertisements