City News Political

ಜೆಡಿಎಸ್ ನ ರೆಬೆಲ್ ಮಾಜಿ ಶಾಸಕ ಎನ್. ಚಲುವರಾಯಸ್ವಾಮಿ ಆಪ್ತನ ಮನೆ ಮೇಲೆ ಐಟಿ ದಾಳಿ

ಮಂಡ್ಯ: ಕಾಂಗ್ರೆಸ್ ನ ನೆಲಮಂಗಲ ಅಭ್ಯರ್ಥಿ ಎನ್. ಚಲುವರಾಯಸ್ವಾಮಿ ಆಪ್ತ, ಉದ್ಯಮಿ ಲಕ್ಷ್ಮಿನಾರಾಯಣ್ ನಿವಾಸದ ಮೇಲೆ ಬೆಂಗಳೂರು, ಮೈಸೂರಿನಿಂದ ಬಂದಿದ್ದ 30 ಅಧಿಕಾರಿಗಳು ದಾಳಿ ನಡೆಸಿ ಪಾಲಿಶೀಲನೆ ನಡೆಸಿದ್ದಾರೆ. ನಾಗಮಂಗಲ ತಾಲೂಕಿನ ಬೋಗಾದಿ ಬಳಿಯ ಸುಖಧರ ಗ್ರಾಮದಲ್ಲಿ ವಾಸವಾಗಿರುವ ಲಕ್ಷೀ ನಾರಾಯಣ ಉದ್ಯಮಿ ಹಾಗೂ ಕಂಟ್ರಾಕ್ಟರ್ ಆಗಿದ್ದಾರೆ.
ಇಷ್ಟಲ್ಲದೇ ಅವರು ಮತ್ತಿಬ್ಬರು ಆಪ್ತರಾದ ಧನಂಜಯ್ ಹಾಗೂ ಬೆಟ್ಟೆಗೌಡ ನಿವಾಸದ ಮೇಲೂ ಐಟಿ ದಾಳಿ ನಡೆದಿದೆ ಎನ್ನಲಾಗಿದ್ದು, ಈ ಬಾರಿಯ ಚುನಾವಣೆಗೆ ಹಂಕ್ ಸಾಗಿಸುತ್ತಿದ್ದಾರೆಂಬ ಆರೋಪ ಹಿನ್ನಲೆ ದಾಳಿ ಮಾಡಲಾಗಿದೆ ಅಂತ ತಿಳಿದು ಬಂದಿದೆ..

Advertisements