Celebs City News Entertainment

Actor Chiranjeevi Sarja-Meghana Raj Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಿರಂಜೀವಿ ಸರ್ಜಾ-ಮೇಘನಾ ರಾಜ್

ಸ್ಯಾಂಡಲ್ ವುಡ್ ನ ಎಂ7ಡ್ಫು ಮುಖದ ಚೆಲುವೆ ನಟಿ ಮೇಘನಾ ರಾಜ್ ಹಾಗೂ ಸರ್ಜಾ ಕುಟುಂಬದ ಕುಡಿ ಚಿರಂಜೀವಿ ಸರ್ಜಾ ಇಂದು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ದಾಂಪತ್ಯ ಜೀವನಕ್ಕೆ ಕಲಿಟ್ಟಿದ್ದಾರೆ.

ವೈಟ್ ಗೌನ್ ಧರಿಸಿ ಕೋರಮಂಗಲದಲ್ಲಿರೋ ಸೇಂಟ್ ಅಂಥೋನಿ ಫ್ರೈರಿ ಚರ್ಚ್ ನಟಿ ಮೇಘನಾ ರಾಜ್ ಅಗಮಿಸಿದ್ರೆ ನಟ ಚಿರಂಜೀವಿ ಸರ್ಜಾ ಬ್ಲೂ ಸೂಟ್ ನಲ್ಲಿ ಪ್ರಾರ್ಥನೆಯಲ್ಲಿ ಭಾಗಿ ಆಗಿದ್ದರು. ಫಾದರ್ ಪ್ರವೀಣ್ ಕುಮಾರ್ ಕ್ರಿಶ್ಚಯನ್ ಸಂಪ್ರದಾಯದಂತೆ ಮದುವೆಯನ್ನು ನಡೆಸಿಕೊಟ್ಟರು.

ಚಿರು ಮೇಘನಾ ಮದುವೆ ಸಂಭ್ರಮದಲ್ಲಿ ಚಿತ್ರರಂಗದ ತಾರೆಯರು ಹಿರಿಯ ನಟಿ ತಾರ, ಅರ್ಜುನ್ ಸರ್ಜಾ, ಐಶ್ವರ್ಯ ಸರ್ಜಾ, ಪ್ರಜ್ವಲ್ ದೇವರಾಜ್ ನಿರ್ದೇಶಕ ಪನ್ನಗ ಭರಣ, ದೃವ ಸರ್ಜಾ, ಆಶಾ ರಾಣಿ ಇನ್ನು ಅನೇಕರು ಕಾಣಿಸಿಕೊಂಡಿದ್ದರು.

ಎರಡು ಕುಟುಂಬಸ್ಥರು ಪ್ರೇಯರ್ ನಲ್ಲಿ ಭಾಗಿಯಾಗಿದ್ದರು. ನಂತರ ಇಬ್ಬರು ಪ್ರಮಾಣ ವಚನ ನೀಡಿ ಬೈಬಲ್ ಮುಟ್ಟಿ ವಧು ವರರು ಮದ್ವೆಗೆ ಸಂಪೂರ್ಣ ಒಪ್ಪಿಗೆ ನೀಡಿದ್ದರು. ಬಳಿಕ ಮೇಘನಾಗೆ ಚೈನ್ ಹಾಕಿ ಶಾಸ್ತ್ರವಾಗಿ ಮದುವೆಯಾದ್ರು.

ಮೇ 2 ಬುಧವಾರದಂದು ಹಿಂದು ಸಂಪ್ರದಾಯದಂತೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಈ ಜೋಡಿ ಸಪ್ತಪದಿ ತುಳಿಯಲಿದ್ದಾರೆ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್. ಅಂದು ನಡೆಯಲಿರುವ ಅದ್ದೂರಿ ವಿವಾಹಕ್ಕೆ ಸೌಥ್ ಸಿನಿ ಇಂಡಸ್ಟ್ರಿ ಹಾಗೂ ಸ್ಯಾಂಡಲ್ವುಡ್ ನ ತಾರೆಯರ ಸಮಗಮವಾಗಲಿದೆ ಎಂದು ತಿಳಿಸಲಾಗಿದೆ..

Advertisements