City News Education

2nd Year PUC Result 2018 Announcement : ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, 6 ಲಕ್ಷಕ್ಕೂ ಅಧಿಕ ವಿಧ್ಯಾರ್ಥಿಗಳ ಭವಿಷ್ಯ ನಿರ್ಧಾರ…!

ಬೆಂಗಳೂರು: ರಜೆಯ ಮೋಜಿನಲ್ಲಿ ತೇಲಾಡುತ್ತಿದ್ದ ವಿದ್ಯಾರ್ಥಿಗಳಿಗೆ ಈಗ ತಾವು ಬರೆದ ಪರೀಕ್ಷೆ ಫಲಿತಾಂಶದ ಸಮಯ ಹತ್ತಿರ ಬಂದಿದೆ. ಸೋಮವಾರ ಏಪ್ರಿಲ್ 30 ರ ಬೆಳಿಗ್ಗೆ 11ಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ.

ರಾಜ್ಯದ ಸರ್ಕಾರಿ, ಅನುದಾನನಿತ ಹಾಗೂ ಅನುದಾನ ರಹಿತ ಪದವಿ ಪೂರ್ವ ಕಾಲೇಜಿನ 6.80 ಲಕ್ಷಕ್ಕೂ ಅಧಿಕ ವಿಧ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದರು. ಉತ್ತರ ಪತ್ರಿಕೆ ಮೌಲ್ಯಮಾಪನವೂ ಪೂರ್ಣಗೊಂಡಿದೆ. ಪದವಿ ಪೂರ್ವ ಇಲಾಖೆ ಅಧಿಕಾರಿಗಳು ಫಲಿತಾಂಶ ನೀಡಲು ಬೇಕಾದ ಸಿದ್ಧತೆ ಮಾಡಿಕೊಂಡಿದ್ದಾರೆ.

ಸೋಮವಾರ ಮಧ್ಯಾಹ್ನ 1 ಗಂಟೆಗೆ ಫಲಿತಾಂಶವನ್ನು ವೆಬ್ ಸೈಟ್ ಗಳಲ್ಲಿ ನೋಡಬಹುದು. ಮೇ 1ರಂದು ಆಯಾ
ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಪಿಯು ಮಂಡಳಿ ನಿರ್ದೇಶಕಿ ಸಿ. ಶಿಖಾ ತಿಳಿಸಿದ್ದಾರೆ.

ಮಾ.1ರಿಂದ 7ರ ವರೆಗೆ ನಡೆದ ಪರೀಕ್ಷೆಯಲ್ಲಿ 3,37,860 ವಿದ್ಯಾರ್ಥಿನಿಯರು ಮತ್ತು 3,53,292 ವಿಧ್ಯಾರ್ಥಿಗಳು ಸೇರಿ 6,84,247 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಫಲಿತಾಂಶವನ್ನು Karen.nic.in , karresults.nic.in ಮತ್ತು pue.kar.nic.in ವೆಬ್ ಸೈಟ್ ಗಳ ಮೂಲಕ ಪಡೆದುಕೊಳ್ಳಬಹುದು..

-ರಂಜಿತಾ ನ್ಯೂಸ್ ಇಂಡಿಯಾ ಬೆಂಗಳೂರು-

Advertisements