City News Crime

ಬೆಂಗಳೂರಿನಲ್ಲಿ ಪ್ರಯಾಣಿಕರ ಸಮೇತ ಖಾಸಗಿ ಬಸ್ ಹೈಜಾಕ್ Private Bus Hijack For 45 minutes With 43 Passengers in Bengaluru

ಬೆಂಗಳೂರು : ಕೇರಳಕ್ಕೆ ಹೊರಟಿದ್ದ ಖಾಸಗಿ ಬಸ್ ಅನ್ನು ಪ್ರಯಾಣಿಕರ ಸಮೇತ ತಡರಾತ್ರಿ ದುಷ್ಕರ್ಮಿಗಳು ಹೈಜಾಕ್ ಮಾಡಿದ ಘಟನೆ ಬೆಂಗಳೂರಿನ ಆರ್.ಆರ್ ನಗರದ ಪಟ್ಟಣಗೆರೆಯಲ್ಲಿ ನಡೆದಿದೇ.

ಅಪಾಯದಲ್ಲಿ ಸಿಲುಕಿದ್ದ ಪ್ರಯಾಣಿಕರು ನೀಡಿದ್ದ ಮಾಹಿತಿ ಆಧರಿಸಿ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ ಪಶ್ಚಿಮ ವಿಭಾಗದ ಪೊಲೀಸರು, ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ಪ್ರಯಾಣಿಕರನ್ನು ರಕ್ಷಿಸಿದ್ದಾರೆ.

ರಾತ್ರಿ 10 ಗಂಟೆಗೆ ಕಳಸಿಪಾಳ್ಯದಿಂದ ಬಸ್ ನಂಬರ್ ಕೆಎ 10 ಎಜಿ 0636 ಹೊರಟಿತ್ತು. ಮೈಸೂರು ರಸ್ತೆಯ ರಾಜರಾಜೇಶ್ವರಿ ನಗರದ ಬಳಿ ಎರಡು ಬೈಕ್ ಗಳಲ್ಲಿ ಬಂದಿದ್ದ ದುಷ್ಕರ್ಮಿಗಳು, ಪೊಲೀಸರ ಸೋಗಿನಲ್ಲಿ ಬಸ್ ತಡೆದಿದ್ದರು. ದಾಖಲೆ ತೋರಿಸುವಂತೆ ಚಾಲಕನಿಗೆ ಹೇಳಿದ್ದರು.
ಚಾಲಕ ಕೆಳಗೆ ಇಳಿಯುತ್ತಿದ್ದಂತೆ,ಆತನ ಮೇಕೆ ಹಲ್ಲೆ ಮಾಡಿದ್ದರು. ನಂತರ, ಬಸ್ ಚಲಾಯಿಸಿಕೊಂಡು ಪಟ್ಟಣಗೆರೆ ಬಳಿಯ ‘ ಪೇರಿಪ್ಲೇಸ್ ಸರ್ವಿಸಸ್ ‘ ಗೋದಾಮಿಗೆ ತೆಗೆಡಿಕೊಂಡು ಹೋಗಿದ್ದರು ಎಂದು ಪೊಲೀಸರು ತಿಳಿಸಿದರು.

ಗೋದಾಮಿನ ಬಾಗಿಲು ಮುಚ್ಚಿದ ದುಷ್ಕರ್ಮಿಗಳು, ಯಾರಾದರೂ ಕರೆ ಮಾಡಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಪ್ರಯಾಣಿಕರನ್ನು ಬೆದರಿಸಿದ್ದರು. ಸುಮಾರು 4 ಗಂಟೆ ಪ್ರಯಾಣಿಕರನ್ನು ಬಸ್ಸಿನಲ್ಲಿಯೇ ಕೊಡಿಹಾಕಿದ್ದರು. ನಸುಕಿನಲ್ಲಿ ಪ್ರಯನಿಕರೊಬ್ಬರು, ನಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

ರಾತ್ರಿ ಗಸ್ತಿನಲ್ಲಿದ್ದ 40 ಸಿಬ್ಬಂದಿಯ ತಂಡ ಸ್ಥಳಕ್ಕೆ ಧಾವಿಸಿ ಗೋದಾಮನ್ನು ಸುತ್ತುವರೀದಿತ್ತು. ಬಾಗಿಲಿನ ಬೀಗ ಒಡೆದು ಒಳಗೆ ಪ್ರವೇಶಿಸುತ್ತ. ಸಿಬ್ಬಂದಿಯನ್ನು ಕಂಡ ಮೂವರು ಸ್ಥಳದಿಂದ ಓಡಿಹೋದರು. ನಾಲ್ವರು ಸಿಕ್ಕಿಬಿದ್ದರು ಎಂದು ವಿವರಿಸಿದರು.

ಫೈನಾನ್ಸ್ ಕಂಪನಿ ಉದ್ಯೋಗಿಗಳು ಆರೋಪಿಗಳು ‘ಫುಲ್ಲರ್ಟನ್ ಇಂಡಿಯಾ ಕ್ರೆಡಿಟ್’ ಹೆಸರಿನಲ್ಲಿ ಫೈನಾನ್ಸ್ ಕಂಪನಿ ಉದ್ಯಾಗಿಗಳು. ಅಪಹರಣ, ಅಕ್ರಮ ದಾಖಸಿಕೊಂಡಿದ್ದೇವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು..

Advertisements