City News

ಬಾಯಿ ಕ್ಯಾನ್ಸರ್ ಪತ್ತೆ ಹಚ್ಚುವ ಸ್ವೀವೆಲ್ ಬಯಾಸ್ಪಿ ಟೆಸ್ಟ್ ಉಪಕರಣಕ್ಕೆ ಚಾಲನೆ

ಬೆಂಗಳೂರು: ಬಾಯಿ ಕ್ಯಾನ್ಸರ್ ರನ್ನು ಆರಂಭದ ಹಂತದಲ್ಲಿಯೆ ಪತ್ತೆ ಹಚ್ಚುವಂತಹ ‘ಸ್ವಿವೆಲ್ ಬಯಾಸ್ಪಿ ಟೆಸ್ಟ್’ ಉಪಕರಣಕ್ಕೆ ಮಾಜಿ ಕ್ರಿಕೆಟ್ ಪಟು ಸಯ್ಯದ್ ಕಿರ್ಮಾನಿ ಚಾಲನೆ ನೀಡಿದರು.
ಶನಿವಾರ ಇಂಡಸ್ ಕಮ್ಯುನಿಕೇಷನ್ ನಗರದ ಸೆಂಚುರಿ ಕ್ಲಬ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವಿವೆಲ್ ಬಯಾಸ್ಪಿ ಟೆಸ್ಟ್ ಉಪಕರಣಕ್ಕೆ ಚಾಲನೆ ನೀಡಲಾಯಿತು. ಈ ಉಪಕರಣದ ಮೂಲಕ ಬಾಯಿ ಕ್ಯಾನ್ಸರನ್ನು ಸರಳ, ನೋವು ರಹಿತವಾದ ಚಿಕಿತ್ಸೆ ನೀಡಬಹುದಾಗಿದ್ದು, ನಿರ್ದಿಷ್ಟವಾಗಿ ಬಾಯಿ ಕ್ಯಾನ್ಸರ್ ಪತ್ತೆ ಹಚ್ಚುವುದಕ್ಕೆ ಮಾತ್ರ ಬಳಸಬಹುದಾದ ಉಪಕರಣವಾಗಿದೆ.
ಈ ವೇಳೆ ಡಾ.ಜಹ್ರಾ ಹುಸೇನಿ ಮಾತನಾಡಿ, ನಾನು ದಶಕಕ್ಕೂ ಅಧಿಕ ಕಾಲದಿಂದ ಕೈಗೊಂಡ ನಿರಂತರ ಸಂಶೋಧನೆಯ ಫಲವಾಗಿದೆ ಸ್ವಿವೆಲ್ ಬಯಾಸ್ಪಿ ಟೆಸ್ಟ್ ಉಪಕರಣವನ್ನು ಅವಿಷ್ಕರಿಸಲಾಗಿದೆ.
ಈ ಉಪಕರಣದ ಮೂಲಕ ಬಾಯಿ ಕ್ಯಾನ್ಸರ್ ನ ಪರೀಕ್ಷೆಯನ್ನು ತುಂಬಾ ಸರಳವಾಗಿ, ಯಾವುದೆ ಅಡ್ಡ ಪರಿಣಾಮವಿಲ್ಲದೆ ಬಳಸಬಹುದಾಗಿದೆ ಎಂದು ತಿಳಿಸಿದರು.
ಭಾರತದಲ್ಲಿ ಬಾಯಿ ಕ್ಯಾನ್ಸರ್ ನಿಂದ ಸವಿಗೀಡಾಗುತ್ತಿರುವ ಪ್ರಮಾಣ ಹೆಚ್ಚಾಗಿದೆ. ಪ್ರತಿ 7 ನಿಮಿಷಗಳಿಗೆ ಒಂದು ಸಾವು ಸಂಭವಿಸುತ್ತದೆ. ಹೀಗಾಗಿ ‘ಸ್ವಿವೆಲ್ ಬಯಾಸ್ಪಿ ಟೆಸ್ಟ್’ ಉಪಕರಣದಿಂದ ಬಾಯಿ ಕ್ಯಾನ್ಸರನ್ನು ಆರಂಭದ ಹಂತದಲ್ಲಿಯೆ ಪತ್ತೆ ಹಚ್ಚಲು ಸಹಕಾರಿಯಾಗಿದೆ ಎಂದು ಅವರು ಮಾಹಿತಿ ನೀಡಿದರು..

-ಉಲ್ಲಾಸ್ ನ್ಯೂಸ್ ಇಂಡಿಯಾ ಬೆಂಗಳೂರು-

Advertisements