Celebs Political

ಮಡಿಕೇರಿಯಲ್ಲಿ ನಟಿ ಪೂಜಾ ಗಾಂಧಿ ಜೆಡಿಎಸ್ ಪರ ಮತಯಾಚನೆ

ಮಳೆ ಹುಡುಗಿ ಪೂಜಾಗಾಂಧಿ ಕೊಡುಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೆಸುವಿಕೆರೆಯಲ್ಲಿ ಮನೆ ಮನೆಗೆ ತೆರಳಿ ಜೆಡಿಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ ಪರವಾಗಿ ಮತಯಾಚಿಸಿದ್ದಾರೆ.
ವಿರಾಜಪೇಟೆ ತಾಲೂಕಿನ ಕೆಸುವಿನಕೆರೆ ಹಾಡಿಗೆ ಭೇಟಿ ನೀಡಿದ್ದ ಅವರು, ಸ್ಥಳೀಯ ಜನರ ಸಮಸ್ಯೆಯನ್ನು ಆಳಿಸಿದ್ದು ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಸಮಸ್ಯೆ ಬಗೆಹರಿಸಲಾಗದೆ ಎಂದು ಭರವಸೆ ನೀಡಿದ್ದಾರೆ.
ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಅಭಿವೃದ್ಧಿ ಕಷ್ಟಸಾಧ್ಯ, ಏನು ಮಾಡಬೇಕು ಅಂದರೂ ರಾಷ್ಟ್ರೀಯ ಪಕ್ಷಗಳ ನಾಯಕರುಗಳಿಗೆ ದೆಹಲಿಯಿಂದ ಅನುಮತಿ ಬೇಕು. ಅದೇ ಜೆಡಿಎಸ್ ನಂತಹ ಪ್ರಾದೇಶಿಕ ಪಕ್ಷಕ್ಕೆ ಅದರ ಅಗತ್ಯವಿಲ್ಲ.
ಜನರ ಸಮಸ್ಯೆ ನೂರಿದ್ದು, ಅವುಗಳನ್ನು ಬಗೆಹರಿಸಲು ಕುಮಾರಸ್ವಾಮಿ ಗೆದ್ದು ಬರುತ್ತಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಜೆಡಿಎಸ್ ಪರ ಪ್ರಚಾರವನ್ನು ನಡೆಸಿದ್ದು, ಜೆಡಿಎಸ್ ನತ್ತ ಜನರ ಒಲವು ಇದೆ ಎಂದು ಪೂಜಾ ಗಾಂಧಿ ಹೇಳಿದರು.
ಇನ್ನು ಕೆಲವರು ಫೋಟೋ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ..

Advertisements