Political

ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದ 5 ರೂಪಾಯಿ ವ್ಯದ್ಯ ಡಾ. ಶಂಕರೇಗೌಡ ಸ್ಪರ್ಧೆ

ಮಂಡ್ಯ: 5ರೂಪಾಯಿ ಎಂದೇ ಪ್ರಸಿದ್ದಾಗಿರುವ ಡಾ.ಎಸ್.ಸಿ ಶಂಕರೇಗೌಡ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಯಲಿದ್ದಾರೆ. ನಾಣ್ಯಗಳ ಗಂಟು ತಂದು ನಾಮಪತ್ರ ಸಲ್ಲಿಸುವ ಸಂದರ್ಭ 10 ಸಾವಿರ ರೂ. ಠೇವಣಿ ಹಣವನ್ನ ನೀಡಿದರು. 10 ಸಾವಿರ ರೂ. ಮೌಲ್ಯದ 5ರೂ. ನಾಣ್ಯಗಳನ್ನು ಸ್ವೀಕರಿಸಿದ ಚುನಾವಣಾಧಿಕಾರಿ ನಂತರ ಆ ನನ್ಯಗಳನ್ನ ನೋಟುಗಳನ್ನಾಗಿ ಪರಿವರ್ತಿಸಿಕೊಂಡರು.
ಮಂಡ್ಯ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಡಾ. ಶಂಕರೇಗೌಡ ಅವರು, 2010ರಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠರು ಹಾಗೂ ಜನರ ಒತ್ತಾಯದ ಮೇರೆಗೆ ದುದ್ದ ಕ್ಷೇತ್ರದಿಂದ ಸ್ಪರ್ದಿಸಿ ಗೆಲುವು ಸಾಧಿಸಿದ್ದರು. ಅಲ್ಲದೆ, ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ತಮಗೆ ಜೆಡಿಎಸ್ ಬಿ. ಫಾರಂ ನೀಡುವಂತೆ ಶಂಕರೇಗೌಡ ಜೆಡಿಎಸ್ ವಿವರಿಷ್ಟರನ್ನ ಮನವಿ ಮಾಡಿದ್ದರು. ಈ ಮಧ್ಯೆ ಬಿಜೆಪಿ ಸೇರುತ್ತಿದರೆಂಬ ಸುದ್ದಿಯೂ ಎಲ್ಲೆಡೆ ಹಬ್ಬಿತ್ತು. ಆದರೆ, ಇದೀಗ ಡಾ.ಶಂಕರೇಗೌಡ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಲಿದ್ದಾರೆ.
ಏಪ್ರಿಲ್ 23ರಂದು ಬೆಳಗ್ಗೆ 11ಕ್ಕೆ ತಮ್ಮ ಅಭಿಮಾನಿಗಳು ಹಾಗೂ ಬೆಂಬಲಿಗರೊಂದಿಗೆ ಉಮೇದಿವರಿಕೆ ಸಲ್ಲಿಸಿದ್ದಾರೆ.

1.5ಕೋಟಿ ಮೌಲ್ಯದ ಆಸ್ತಿ ಘೋಷಣೆ

ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಡಾ.ಎಸ್.ಸಿ.ಶಂಕರೇಗೌಡ ಅವರು 1.5 ಕೋಟಿ ಆಸ್ತಿ ಘೋಷಣೆ ಮಾಡಿದ್ದಾರೆ.
91.51 ಲಕ್ಷ ಮೌಲ್ಯದ ಸ್ಥಿರಾಸ್ತಿ, 2.66ಲಕ್ಷ ಮೌಲ್ಯದ ಚರಾಸ್ತಿ ಹೊಂದಿರುವುದಾಗಿ ಅವರು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ತವರು ಶಿವಳ್ಳಿ ಗ್ರಾಮದಲ್ಲಿ 5 ಎಕರೆ ಕೃಷಿ ಜಮೀನು, ನಗರದ ಬಂದಿಗೌಡ ಬಡಾವಣೆಯಲ್ಲಿ ಒಂದು ಮನೆ ಹೊಂದಿದ್ದಾರೆ.
ಒಂದು ಶವರ್ಲೆಟ್ ಬೀಟ್ ಕಾರು, ಒಂದು ಹೊಂಡ ಆಕ್ಟಿವಾ ಸ್ಕೂಟರ್ ಅವರ ಬಳಿ ಇವೆ.
ಪತ್ನಿ ರುಕ್ಮಿಣಿ ಗೌಡ ಅವರ ಹೆಸರಲ್ಲಿ 12.79 ಲಕ್ಷ ಚರಾಸ್ತಿ ಇದೆ. 450 ಗ್ರಾo ಚಿನ್ನ, ಒಂದು ಹೊಂಡ ಆಕ್ಟಿವಾ ಸ್ಕೂಟರ್ ಹೊಂದಿದ್ದಾರೆ, ಪುತ್ರಿ ಉಜ್ವಲ ಹೆಸರಿನಲ್ಲಿ 94 ಸಾವಿರ ಇದೆ. ಯಾವುದೇ ಸಾಲ ಇಲ್ಲ ಎಂದು ಪ್ರಮಾಣ ಪಾತ್ರದಲ್ಲಿ ಉಲ್ಲೇಖಿಸಿದ್ದಾರೆ..

-ರಂಜಿತಾ ಗೌಡ ನ್ಯೂಸ್ ಇಂಡಿಯಾ ಬೆಂಗಳೂರು-