Entertainment

ಇಂದು ನಟ ಸಾರ್ವಭೌಮ ಡಾ.ರಾಜಕುಮಾರ್ ಅವರ 90 ನೇ ಜನ್ಮದಿನ

ಇಂದು ವರನಟ ಡಾ.ರಾಜಕುಮಾರ್ ಅವರ 90 ನೇ ಜನ್ಮ ದಿನಾಚರಣೆ. ಯಾವಾಗಲೂ ಹಬ್ಬದ ರೀತಿ ನಡೆಯುತ್ತೆ. ಅಭಿಮಾನಿಗಳು ಬಹು ಸಂಭ್ರಮದಿಂದ ಡಾ.ರಾಜ್ ಕುಮಾರ್ ಜನ್ಮ ದಿನಾಚರಣೆಯನ್ನು ಆಚರಣೆ ಮಾಡ್ತಾರೆ. ಪ್ರತಿವರ್ಷ ರಾಜಕುಮಾರ್ ಹುಟ್ಟುಹಬ್ಬದ ದಿನ ಸಮಾಧಿ ಬಳಿ ಹಾಗೂ ರಾಜ್ ಮನೆಗೆ ಬರುವ ಭಕ್ತಾದಿಗಳಿಗೆ ಅನ್ನದಾನ ನಡೆಸಲಾಗಿತ್ತು. ಆದರೆ ಈ ಬಾರಿ ಚುನಾವಣಾ ನೀತಿ ಸಂಹಿತೆ ಇರೋದ್ರಿಂದ ಇದು ಸಧ್ಯವಾಗಿಲ್ಲ.
ಅಭಿಮಾನಿಗಳು ಅಂದ್ರೆ, ಕೇವಲ ಜನಸಾಮಾನ್ಯರು ಮಾತ್ರವಲ್ಲ. ಸಿನಿಮಾ ಕಲಾವಿದರು ಕೂಡ ರಾಜ್ ಅವರ ಅಪ್ಪಟ ಅಭಿಮಾನಿಗಳು. ಅಭಿಮಾನಿಗಳು ವಿಭಿನ್ನವಾಗಿ ಅವರ ಹುಟ್ಟು ಹಬ್ಬ ಅಣ್ಣಾವ್ರ ಹುಟ್ಟುಹಬ್ಬಕ್ಕೆ ಹಲವು ನಟ ನಟಿಯರು ಕೂಡ ವಿಶ್ ಮಾಡಿದ್ದಾರೆ.
ಜಗ್ಗೇಶ್, ಉಪೇಂದ್ರ, ರವಿಶಂಕರ್ ಗೌಡ, ಶಾನ್ವಿ ಶ್ರೀವಾಸ್ತವ್, ಡಾಲಿ ಖ್ಯಾತಿಯ ಧನಂಜಯ್ ಸೇರಿದಂತೆ ಹಲವರು ಟ್ವಿಟ್ಟರ್ ಮೂಲಕ ವರನಟನಿಗೆ ನಮನ ಸಲ್ಲಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ವರನಟ ಡಾ.ರಾಜಕುಮಾರ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಗಣ್ಯರು ಅಣ್ಣವರಿಗೆ ಶುಭಾಷಯ ತಿಳಿಸಿದ್ದಾರೆ..

Advertisements