Sports

ಐಪಿಎಲ್ 2018: ಹೈದರಾಬಾದ್ ವಿರುದ್ಧ ಚೆನ್ನೈ ಗೆ ರೋಚಕ ಜಯ

ಹೈದರಾಬಾದ್: ಐಪಿಎಲ್ ಟಿ 20 ಪಂದ್ಯದಲ್ಲಿ ಸನ್ ರೈಸಸ್ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 4 ರನ್ ಗಳ ರೋಚಕ ಗೆಲವು ಸಾಧಿಸಿದೆ.

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್, ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಹಾಗೂ ಚನ್ನೈ ಸೂಪರ್ ಕಿಂಗ್ಸ್ ನಡುವೆ ಹಣಾಹಣಿ ನಡೆದಿದ್ದು, ಚನ್ನೈ ಸೂಪರ್ ಕಿಂಗ್ಸ್ ತಂಡ ಸನ್ ರೈಸರ್ಸ್ ವಿರುದ್ಧ 4 ರನ್ ಗಳ ರೋಚಕ ಜಯ ಸಾಧಿಸಿದೆ.

ಹೈದರಾಬಾದ್ ತಂಡದ ಕೇನ್ ವಿಲಿಯಮ್ಸನ್ 84 ರನ್(51ಎ, 5ಬೌ,5ಸಿ), ಯೂಸೂಫ್ ಪಠಾಣ್ 45 ರನ್(27ಎ, 1ಬೌ, 4ಸಿ) ಮತ್ತು ಶಾಕಿಬ್ ಅಲ್ ಹಸನ್ 24 ರನ್ ಗಳ ಕೊಡುಗೆ ನೀಡಿದರು. ಕೊನೆಯಲ್ಲಿ ರಿಶೀದ್ ಖಾನ್ 4 ಎಸೆತಗಳಲ್ಲಿ 1ಬೌಂಡರಿ ಮತ್ತು 2ಸಿಕ್ಸರ್ ಗಳಿಸಿದರು.
ಆದರೆ ಅವರ ಹೋರಾಟ ಫಲ ನೀಡಲಿಲ್ಲ, ತಂಡ ಗೆಲುವಿನ ದಡ ಸೇರಲಿಲ್ಲ. ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ 5 ಎಸೆತಗಳಲ್ಲಿ 5 ರನ್ ಗಲ್8ಸಿದರು, ಇದರಿಂದಾಗಿ ತಂಡದ ಗೆಲುವು ಕೈ ಜಾರಿತು. ಚನ್ನೈ ನಗುವಿನ ನಗೆ ಬೀರಿತು.
ದೀಪಕ್ ಚಹಾರ್ 15ಕ್ಕೆ 3 ವಿಕೆಟ್ ಉರುಳಿಸಿದರು. ಈ ಗೆಲುವಿನೊಂದಿಗೆ ಚನ್ನೈ ಎಂಟು ಅಂಕಗಳನ್ನು ಸಂಪಡಿಸಿದ್ದು, ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದೆ..