Entertainment Political

ಮಳೆ ಹುಡುಗಿ ಪೂಜಾ ಗಾಂಧಿ ಮತ್ತೊಮ್ಮೆ ಜೆಡಿಎಸ್ ಸೇರ್ಪಡೆ

ಕನ್ನಡ ಚಿತ್ರರಂಗದ ಖ್ಯಾತ ನಟಿ ಪೂಜಾ ಗಾಂಧಿ ಮತ್ತೊಮ್ಮೆ ಜೆಡಿಎಸ್ ನತ್ತ ತಮ್ಮ ಚಿತ್ತ ಹರಿಸಿದ್ದಾರೆ. ಜೆಡಿಎಸ್ ಪಕ್ಷವನ್ನ ಬಿಟ್ಟು ಹೋಗಿದ್ದ ಮಳೆ ಹುಡುಗಿ ಪೂಜಾ ಗಾಂಧಿ ಇಂದು ಜೆಡಿಎಸ್ ಪಕ್ಷದ ಕಚೇರಿಯಲ್ಲಿ ನಾಯಕ ಪಿಜಿಆರ್ ಸಿಂಧ್ಯ ನೇತೃತ್ವದಲ್ಲಿ ನಟಿ ಪೂಜಾ ಗಾಂಧಿ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದಾರೆ.
2012 ರಲ್ಲಿ ಜೆಡಿಎಸ್ ಸೇರಿದ್ದ ಪೂಜಾ ಗಾಂಧಿ, ಬಳಿಕ ಯಡಿಯೂರಪ್ಪ ಅವರ ಕೆಜೆಪಿ ಪಕ್ಷಕ್ಕೆ ಸೇರಿ, ಅಲ್ಲಿಂದ ಶ್ರೀಮರಮುಲು ಅವರ ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿ ರಾಯಚೂರಿನಿಂದ ಕಣಕ್ಕಿಳಿದು ಹೀನಾಯವಾಗಿ ಸೋಲನ್ನಪ್ಪಿದರು, ಇದೀಗ ಮತ್ತೆ ಜೆಡಿಎಸ್ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರೋ ಮಳೆ ಬೆಡಗಿ ಪೂಜಾ ಗಾಂಧಿ.
ಜೆಡಿಎಸ್ ಸೇರ್ಪಡೆ ಬಳಿಕ ಮಾತನಾಡಿದ ಅವರು “ಮೊದಲು ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ಕ್ಷೇಮ ಕೇಳಲು ಬಯಸುತ್ತೇನೆ, ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಪಕ್ಷದಿಂದ ಹೊರಗೆ ಹೋಗಿದ್ದೆ, ಮತ್ತೆ ನನ್ನ ಮನೆಗೆ ನಾನು ಮರಳಿ ಬಂದಿದೇನೆ. ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ, ನನಗೆ ಟಿಕೆಟ್ ಕೂಡ ಬೇಡ. ಪಕ್ಷದ ಸಾಮಾನ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತೇನೆ” ಎಂದು ಹೇಳಿದ ಪೂಜಾ ಗಾಂಧಿ.

-ರಂಜಿತಾ ಗೌಡ ನ್ಯೂಸ್ ಇಂಡಿಯಾ ಬೆಂಗಳೂರು-