Political

ಬಿಜೆಪಿ ಅಭ್ಯರ್ಥಿಗಳ 3ನೇ ಪಟ್ಟಿ ರಿಲೀಸ್

ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ 3ನೇ ಪಟ್ಟಿಯನ್ನ ಬಿಡುಗಡೆ ಮಾಡಲಾಗಿದೆ. 59 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ 3 ನೇ ಪಟ್ಟಿಯಲ್ಲಿ ಘೋಷಿಸಲಾಗಿದೆ.

ಕೋಲಾರ ಕ್ಷೇತ್ರದಲ್ಲಿ ಬದಲಾವಣೆ ಮಾಡಲಿದ್ದು, ಎಸ್.ಅಶ್ವಿನಿ ಅವರಿಗೆ ಟಿಕೆಟ್ ನೀಡಲಾಗಿದೆ.
ಬಡಾವಣೆ ಮಾಡಿರುವ ಕ್ಷೇತ್ರ ಸೇರಿದಂತೆ ಮೂರನೇ ಪಟ್ಟಿಯಲ್ಲಿ 60 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ.

* ಚಾಮುಂಡೇಶ್ವರಿಯಲ್ಲಿ ಗೋಪಾಲ್ ರಾವ್ ಅವರಿಗೆ ನೀಡಲಾಗಿದೆ.

* ಹುಣಸೂರು ಕ್ಷೇತ್ರಕ್ಕೆ ರಮೇಶ್ ಕುಮಾರ್ ಗೆ ನೀಡಲಾಗಿದೆ.

*ಕೊಡ್ಲಿಗಿ ಕ್ಷೇತ್ರಕ್ಕೆ ಪಕ್ಷಕ್ಕೆ ಹೊಸದಾಗಿ ಬಂದ ಎನ್. ವೈ.ಗೋಪಾಲಕೃಷ್ಣ ಅವರಿಗೆ ನೀಡಲಾಗಿದೆ.

*ಅರಸೀಕೆರೆ ಕ್ಷೇತ್ರಕ್ಕೆ ವಿ.ಸೊಮ್ಮಣ್ಣ ಅವರ ಪುತ್ರ ಡಾ.ಅರುಣ್ ಸೋಮಣ್ಣನಿಗೆ ಟಿಕೆಟ್ ನೀಡಲಾಗಿದೆ.

*ಹರಪ್ಪನಹಳ್ಳಿ ಕ್ಷೇತ್ರದಲ್ಲಿ ಕರುಣಾಕರ ರೆಡ್ಡಿಗೆ ನೀಡಲಾಗಿದೆ.

*ಹರಿಹರ ಕ್ಷೇತ್ರಕ್ಕೆ ಬಿ.ಪಿ ಹರೀಶ್, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಯಶವಂತರಾವ್ ಜಾಧವ್ ಗೆ ನೀಡಲಾಗಿದೆ.

*ಮೊದಲೆರಡು ಪಟ್ಟಿಯಲ್ಲಿ ಕಾಣಿಸಿಕೊಳ್ಳದ ಕೆ.ಜಿ ಬೋಪಯ್ಯ ಅವರ ಹೆಸರನ್ನು ವಿರಾಜಪೇಟೆ ಕ್ಷೇತ್ರಕ್ಕೆ ಅಂತಿಮಗೊಳಿಸಲಾಗಿದೆ.

ಮೊದಲ ಪಟ್ಟಿಯಲ್ಲಿ 72 ಅಭ್ಯರ್ಥಿಗಳನ್ನು ಘೋಷಿಸಿದ್ದ ಬಿಜೆಪಿ 2ನೇ ಪಟ್ಟಿಯಲ್ಲಿ 82 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. 3 ನೇ ಪಟ್ಟಿ ಬಿಡುಗಡೆ ಮಾಡಿದ ಬಳಿಕವೂ ಇನ್ನೂ 11 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿಲ್ಲ.

Advertisements