Political

Date Fixed For Nomination Filling Of Congress Candidates ‘ಕೈ’ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಮುಹೂರ್ತ ಫಿಕ್ಸ್..!

ಬೆಂಗಳೂರು: ನಗರದ 28 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಮೊಹೂರ್ತ ಫಿಕ್ಸ್ ಆಗಿದೆ.

ರಾಮಲಿಂಗ ರೆಡ್ಡಿ ಬಿಟಿಎಂ ವಾರ್ಡ್ ಕಚೇರಿಯಲ್ಲಿ ಇಂದು ಬೆಳಗ್ಗೆ ಹಾಗೂ ಜಯ ನಗರ ವಾರ್ಡ್ ಕಚೇರಿಯಲ್ಲಿ ಸೌಮ್ಯ ರೆಡ್ಡಿ ನಾಮಪತ್ರ ಸಲ್ಲಿಸಲಿದ್ದಾರೆ. ಸರ್ವಜ್ಞ ನಗರ ಕೆ.ಜೆ ಜಾರ್ಜ್ ಇದೆ 23ರಂದು ಬನಸವಾಡಿ ವರ್ಡ್ ಕಚೇರಿಯಲ್ಲಿ ಕೆ.ಆರ್.ಪುರಂ ನಿಂದ ಭೈರತಿ ಬಸವರಾಜು ನಾಮಪತ್ರ ಸಲ್ಲಿಸಲಿದ್ದಾರೆ.
ಯಶವಂತಪುರ ಎಸ್.ಟಿ ಸೋಮಶೇಖರ್ ಇದೇ 20ರಂದು ಹಾರೋಹಳ್ಳಿ ವಾರ್ಡ್ ಕಚೇರಿಯಲ್ಲಿ, ಆರ್.ಆರ್ ನಗರ ಮುನಿರತ್ನ ವಾರ್ಡ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ದಾಸರಹಳ್ಳಿ ಪಿ.ಎನ್. ಕೃಷ್ಣ ಮೂರ್ತಿ ಇದೆ 23ರಂದು ಬಾಗಳಗುಂಟೆ ವಾರ್ಡ್ ಕಚೇರಿ ಹಾಗೂ ಮಹಾಲಕ್ಷ್ಮಿ ಲೇಔಟ್ ನ ಎಚ್.ಎನ್. ಮಂಜುನಾಥ ಏಪ್ರಿಲ್21 ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ಪುಲಿಕೇಶಿನಗರ ಅಖಂಡ ಶ್ರೀನಿವಾಸ ಮೂರ್ತಿ ಇದೇ ಏಪ್ರಿಲ್ 24ರಂದು ವಾರ್ಡ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ದಿನೇಶ್ ಗುಂಡೂರಾವ್ ಗಾಂಧಿನಗರ ಏಪ್ರಿಲ್ 20ರಂದು ವಾರ್ಡ್ ಕಚೇರಿ, ಚಮರಾಜಪೇಟೆ ಜಮೀರ್ ಅಹ್ಮದ್ ಖಾನ್ ಏಪ್ರಿಲ್24ರಂದು ವಾರ್ಡ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲು ರೆಡಿ ಆಗಿದ್ದಾರೆ..

Advertisements