Entertainment

Sudeep BMW bike ride | ಹೊಸ ಬಿಎಂಡಬ್ಲ್ಯೂ ಬೈಕ್ ನಲ್ಲಿ ಕಿಚ್ಚನ ಸವಾರಿ

ಬೆಂಗಳೂರು: ಪ್ರತಿಯೊಬ್ಬರಿಗೂ ಒಂದೊಂದು ಆಸೆ ಇರುತ್ತೆ.ಅದೇ ರೀತಿ ಕಿಚ್ಚ ಸುದೀಪ್ ಗೊ ಕಾರ್ ಮತ್ತು ಬೈಕ್ ಗಳ ಮೇಲೆ ಸಕತ್ ಕ್ರೇಜ್ ಮತ್ತು ಇಂಟ್ರಸ್ಟ್ ಇದೆ. ಈಗಾಗಲೇ ಕಿಚ್ಚನ ಬಳಿ ಸಾಕಷ್ಟು ಕಾರ್ ಮತ್ತು ಬೈಕ್ ಇದ್ದು ಈಗ ಲೀಸ್ಟ್ ನಲ್ಲಿ ಹೊಸದೊಂದು ಗಾಡಿ ಸೇರ್ಪಡೆಯಾಗಿದೆ. ಹೊಸ ಬಿಎಂಡಬ್ಲ್ಯೂ ಆರ್ 1200 ಬೈಕ್ ಖರೀದಿ ಮಾಡಿದ ತಕ್ಷಣವೇ ಮದಕರಿ ನಾಯಕ ಲಾಂಗ್ ರೈಡ್ ಹೋಗಿದ್ದಾರೆ.

ಹಾಗೆ ಕಿಚ್ಚನ ಲಾಂಗ್ ರೈಡ್ ಗೆ ಬಿಗ್ ಬಾಸ್ ಖ್ಯಾತಿಯ ಚಂದನ್ ಕೂಡ ಸಾಥ್ ನೀಡಿದ್ದಾರೆ.

ನಟ ಸುದೀಪ್ ಬೈಕ್ ಕೊಂಡುಕೊಳ್ಳುವಾಗ ನಟ ಚಂದನ್ ಕೂಡ ಜೊತೆಯಲ್ಲಿ ಹೋಗಿದ್ದಾರೆ. ಈ ಹಿಂದೆ ಸುದೀಪ್ ಹಾಗೂ ಸಿನಿಮಾ ಸ್ನೇಹಿತರು ಬೈಕ್ ನಲ್ಲಿ ಶಿವಮೊಗ್ಗಕ್ಕೆ ರೈಡ್ ಹೋಗಿದ್ದರು. ಕಿಚ್ಚ ಹೊಸ ಬೈಕ್ ಖರೀದಿ ಮಾಡಿದ್ದಾರೆ ಎನ್ನುವ ವಿಚಾರ ಸಾಕಷ್ಟು ವೈರಲ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸುದೀಪ್ ಬೈಕ್ ರೈಡ್ ಮಾಡುತ್ತಿರೋ ಫೋಟೋಗಳು ಮತ್ತು ವೀಡಿಯೋಗಳ ಹರಿದಾಡುತ್ತಿದೆ.

ಸದ್ಯ ಸಖತ್ ವೈರಲ್ ಆಗಿರೋ ಮದಕರಿ ನಾಯಕನ ಬೈಕ್ ಸವಾರಿ. ಸಿಲಿಕಾನ್ ಸಿಟಿಯನ್ನೆಲ್ಲ ರಾತ್ರಿ ಇಡಿ ಸುತ್ತಡದ್ದಿದ್ದಾರೆ, ಇನ್ನು ಜಯನಗರ ಸೇರಿದಂತೆ ಅಕ್ಕ ಪಕ್ಕದ ರಸ್ತೆಗಳಲ್ಲಿ ಸುದೀಪ್ ಜಾಲಿ ರೈಡ್ ಮಾಡಿದ್ದಾರೆ..

Advertisements