Entertainment Movies

ಕೃಷ್ಣ ತುಳಸಿಯ ಪ್ರೇಮ ಸಂಚಾರ ಇಂದು ಥಿಯೇಟರ್ ಗೆ ಕೃಷ್ಣ-ತುಳಸಿಯ ಆಗಮನ

ಸುಖೇಶ್ ನಾಯಕ್ ಅವರ ನಿರ್ದೇಶನದ ವಿನೂತನ ಪ್ರೇಮ ಕಥೆ ಹೊಂದಿದ ಚಿತ್ರ ‘ಕೃಷ್ಣ ತುಳಸಿ’ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸಂಚಾರಿ ವಿಜಯ್ ಈ ಚಿತ್ರದಲ್ಲಿ ಒಬ್ಬ ಅಂಧನಾಗಿ ಕಾಣಿಸಿಕೊಂಡಿದ್ದಾರೆ. ಮೇಘಶ್ರೀ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ. ಮೊನ್ನೆ ಈ ಚಿತ್ರದ ಬಿಡುಗಡೆಪೂರ್ವ ಪತ್ರಿಕಾಗೋಷ್ಠಿ ನಡೆದಿತ್ತು.

ಚಿತ್ರದ ನಿರ್ಮಾಪಕ ಎಂ.ನಾರಾಯಣ್ ಸ್ವಾಮಿ ಮಾತನಾಡುತ್ತ ಸಿಸೀಮಾ ಅದ್ಭುತವಾಗಿ ಮೂಡಿಬಂದಿದೆ. ಟೀಸರ್ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ನಾನು ಸಿನಿಮಾ ಆರಂಭಿಸುವಗಲೇ ಹೇಳಿದ್ದೆ. ಇಡೀ ಚಿತ್ರದಲ್ಲಿ ಎಲ್ಲೂ ಡಬ್ಬಲ್ ಮೀನಿಂಗ್ ಇರಬಾರದು ಎಂದು ಕಂಡೀಷನ್ ಹಾಕಿದ್ದೆ, ನಿರ್ದೇಶಕರು ಹೇಳಿದಂತೆ ನಡೆದುಕೊಂಡಿದ್ದಾರೆ.

“ಇದು ದೃಷ್ಟಿದೋಷವುಳ್ಳ ವ್ಯಕ್ತಿಯೊಬ್ಬನ ಪ್ರೇಮ ಕಥೆಯಾಗಿದೆ” ಎನ್ನುವ ನಟ ವಿಜಯ್ “ನಾನು ಈ ಮುನ್ನ ದೃಷ್ಟಿದೋಷವುಳ್ಳ ವ್ಯಕ್ತಿಯ ಕಥೆಗೆ ಸಂಬಂಧಿಸಿದಂತೆ ಒಂದು ಸ್ಕ್ರಿಪ್ಟ್ ತಯಾರಿಸಿದ್ದೆ. ಆದರೆ ಈ ಚಿತ್ರದಲ್ಲಿ ಅಭಿನಯಿಸುವ ಅವಕಾಶ ದೊರಕಿದ ಕಾರಣ ನನ್ನ ಸ್ಕ್ರಿಪ್ಟ್ ಅನ್ನು ಇದೆ ಪಾತ್ರದಲ್ಲಿ ಅಳವಡಿಸಿಕೊಂಡಿದ್ದೇನೆ” ಎಂದರು.

ನಾರಾಯಣ ಸ್ವಾಮಿ ನಿರ್ಮಾಣದ ‘ಕೃಷ್ಣ ತುಳಸಿ’ ಚಿತ್ರಕ್ಕೆ ಕಿರಣ್ ರವೀಂದ್ರನಾಥ್ ಸಂಗೀತವಿದ್ದು ನವೀನ್ ಅಕ್ಷಿ ಛಾಯಾಗ್ರಹನವನ್ನು ಒಳಗೊಂಡಿದೆ..

Advertisements