Political

Shikaripura: B.S Yaddyurappa Filed his Nomination For State Assembly Election ಶಿಕಾರಿಪುರದಲ್ಲಿ ನಾಮಪತ್ರ ಸಲ್ಲಿಸಿದ ಬಿ.ಎಸ್ ಯಡಿಯೂರಪ್ಪ

ಬಿ.ಎಸ್.ಯಡಿಯೂರಪ್ಪ ಇಂದು ತಮ್ಮ ಸ್ವಕ್ಷೇತ್ರ ಶಿಕಾರಿಪುರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಮೊದಲಿಗೆ ತಮ್ಮ ಇಷ್ಟದೈವ ಉಚ್ಚಂಗಿ ಸ್ವಾಮಿಯ ದರ್ಶನಾಶೀರ್ವಾದಗಳನ್ನು ಪಡೆದ ಅವರು ದೇವಸ್ಥಾನದಿಂದ ಸಂತೆ ಮೈದಾನದ ವರೆಗೆ ರೋಡ್ ಶೋ ನಡೆಸಿ ಸಾರ್ವಜನಿಕರಲ್ಲಿ ಮತಯಾಚಿಸಿದರು. ಹೊಸ ಸಂತೆ ಮೈದಾನದಲ್ಲಿ ಯಡಿಯೂರಪ್ಪನವರು ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಬಾರಿ ನೀವು ಆರಿಸುತ್ತಿರುವುದು ಕೇವಲ ಒಬ್ಬ ಬಿಜೆಪಿ ಶಾಸಕನನ್ನಲ್ಲ. ಆದರೆ ರಾಜ್ಯದ ಭಾವಿ ಮುಖ್ಯಮಂತ್ರಿಯನ್ನು ಎಂದು ಹೇಳಿದ ಅವರ ಭಾಷಣಕ್ಕೆ ಸಾರ್ವಜನಿಕರು ಕರತಾಡನಗಳ ಮೂಲಕ ಬೆಂಬಲ ಸೂಚಿಸಿದರು. ನಂತರ ಚುನಾವಣಾ ಆಯುಕ್ತರ ಕಚೇರಿಗೆ ತೆರಳಿ ತಮ್ಮ ನಾಮಪತ್ರ ಸಲ್ಲಿಸಿದರು. ಛತ್ತೀಸ್ ಗಢದ ಮುಖ್ಯಮಂತ್ರಿ ಶ್ರೀ ರಮಣ್ ಸಿಂಗ್, ಕೇಂದ್ರ ಸಚಿವರಾದ ಶ್ರೀ ಅನಂತ್ ಕುಮಾರ್, ಶ್ರೀ ಶ್ರೀರಾಮುಲು ಮುಂತಾದವರು ಈ ಸಂದರ್ಭದಲ್ಲಿ ಯಡಿಯೂರಪ್ಪ ಗೆ ಸಾಥ್ ನೀಡಿದ್ದಾರೆ.