Bollywood Entertainment

10 ವರ್ಷಗಳ ಬಳಿಕ ಮತ್ತೆ ತೆರೆಮೇಲೆ ಸಲ್ಲು-ಪ್ರಿಯಾಂಕಾ ಜೋಡಿ

ಅಂತಾರಾಷ್ಟ್ರೀಯ ಮಟ್ಟದ ಸಿನಿಮಾ ಪ್ರೊಜೆಕ್ಟ್ ಗಳಲ್ಲಿ ನಟಿಸುತ್ತಿರುವ ಪ್ರಿಯಾಂಕ ಚೊಪ್ರಾ ದಶಕದ ನಂತರ ಮತ್ತೆ ಸಲ್ಮಾನ್ ಖಾನ್ ಜೊತೆ ಅಭಿನಯಿಸುತ್ತಿದ್ದಾರೆ.

ಬಾಲಿವುಡ್ ನಿಂದ ದೂರವಿರುವ ಪ್ರಿಯಾಂಕ ಚೊಪ್ರಾ ಮತ್ತೆ ಬಿಟೌನ್ ಗೆ ಕಮ್ ಬ್ಯಾಕ್ ಆಗಿದ್ದಾರೆ. ಸುಮಾರು 2 ವರ್ಷದ ನಂತರ ಮತ್ತೆ ಹಿಂದಿ ಸಿನಿಮಾದಲ್ಲಿ ಪಿಗ್ಗಿ ನಟಿಸಲು ಮುಂದಾಗಿದ್ದಾರೆ.
ಹಿಂದಿ ಚಿತ್ರಕ್ಕೆ ಹಿಂತಿರುಗಳು ಪ್ರಿಯಾಂಕಾ ಆಯ್ಕೆ ಮಾಡಿರುವ ಸಿನಿಮಾ ಅಲಿ ಅಬ್ಬಾಸ್ ಖಾನ್ ಅವರ ‘ಭಾರತ್’ ಸಿನಿಮಾ.

ಇದೀಗ 10 ವರ್ಷಗಳ ನಂತರ ‘ಭಾರತ್’ ಚಿತ್ರದಲ್ಲಿ ಮತ್ತೆ ಒಂದಾದ ಈ ಸಲ್ಲು-ಪ್ರಿಯಾಂಕಾ ಜೋಡಿ.

ಚಿತ್ರಕ್ಕೆ ಸಲ್ಮಾನ್ ಖಾನ್ ಸಂಬಂಧಿ ಅತುಲ್ ಅಗ್ನಿಹೋತ್ರ ಬಂಡವಾಳ ಹೊಡುತ್ತಿದ್ದು, ಇದೊಂದು ಲವ್ ಸ್ಟೋರಿ, ದೇಶಭಕ್ತಿ ಕುರಿತು ಸಿನಿಮಾ ಆಗಿದೆ. ಚಿತ್ರದಲ್ಲಿ ಪ್ರಿಯಾಂಕಾ ಚೊಪ್ರಾ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಾಲಿವುಡ್ ನಲ್ಲಿ ಈಗ ಯಶಸ್ಸಿನ ಅಲೆಯಲ್ಲಿರುವ ಈ ಜೋಡಿ ಮೊದಲ ಬಾರಿಗೆ ಒಂದಾಗಿದ್ದು ‘ಮುಜಸೇ ಶಾದಿ ಕರೋಗಿ’ (2004) ಚಿತ್ರದ ಮೂಲಕ. ನಂತರ ‘ಸಲ್ಮಾನ್-ಇ-ಇಸ್ಟ್(2007), ಗಾಡ್ ಥುಸ್ಸಿ ಗ್ರೇಡ್ ಹೋ (2008) ಚಿತ್ರಗಳಲ್ಲಿ ನಟಿಸಿದ್ದರು. ಇದೀಗ ಬಹುದಿನಗಳ ನಂತರ ಒಂದಾಗಿತ್ತಿರುವ ಈ ಜೋಡಿ ‘ಭಾರತ್’ ಚಿತ್ರದ ಮೂಲಕ ಕಮಲ್ ಮಾಡಿದರು ಅಚ್ಚರಿ ಇಲ್ಲ…