Political

ಚಾಮುಂಡೇಶ್ವರಿಯಲ್ಲಿ ಸಿದ್ದು ಬಿರುಸಿನ ಪ್ರಚಾರ

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ನಗರದಲ್ಲಿ ಬೆಳಗ್ಗೆ ಬಸವೇಶ್ವರರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕ ಪ್ರತಿನಿಧಿಗಳ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಮುಖ್ಯಮಂತ್ರಿಯವರು ಜಟ್ಟಿ ಹುಂಡಿಯಿಂದ ಪ್ರಚಾರ ಆರಂಭಿಸಿದರು.
ಗೋಹಳ್ಳಿ, ಕುಮಾರಬೀಡು, ಬೀರಿಹುಂಡಿ, ಶೆಟ್ಟ ನಾಯ್ಕನಹಳ್ಳಿ, ಮಾದಹಳ್ಳಿಯಲ್ಲಿ ಮುಖ್ಯಮಂತ್ರಿಯವವರು ಪ್ರಚಾರ ನಡೆಸಿದರು.
ಬೀರಿಹುಂಡಿಗೆ ಆಗಮಿಸಿದ ಮುಖ್ಯಮಂತ್ರಿಯರನ್ನು ಗ್ರಾಮಸ್ಥರು ಪೂರ್ಣಕುಂಭಗಳೊಂದಿಗೆ ಬರ ಮಾಡಿಕೊಂಡರು.
ಲೋಕೋಪಯೋಗಿ ಸಚಿವ ಡಾ.ಮಹಾದೇವಪ್ಪ, ಮಾಜಿ ಶಾಸಕ ಸತ್ಯನಾರಾಯಣ ಅವರು ಪ್ರಚಾರದಲ್ಲಿ ಭಾಗಿಯಾದರು.IMG-20180418-WA0023