Crime

ಆಸಿಫಾ ಅತ್ಯಾಚಾರ ಪ್ರಕರಣ ಖಂಡಿಸಿ ಪ್ರತಿಭಟನೆ

ಬೆಂಗಳೂರು: ಆಸಿಫಾ ಅತ್ಯಾಚಾರ ಪ್ರಕರಣವನ್ನ ಖಂಡಿಸಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಪ್ರತಿಭಟನೆ ಮಾಡಲಾಯ್ತು.. ನಗರದ ಟೌನ್ ಹಾಲ್ ಬಳಿ ನಡೆದ ಪ್ರತಿಭಟನೆಯಲ್ಲಿ ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಕ್ಯಾಂಡಲ್ ಹೊತ್ತಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ದೇಶದಲ್ಲಿ ಬಲಿಷ್ಟ ಕಾನೂನು ಜಾರಿಯಾಗಬೇಕು ಅಂತ ಒತ್ತಾಯಿಸಿದ್ರು.. ಇನ್ನೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ. ಕೃಪಾ ಅಮರ್ ಆಳ್ವಾ ಮಾತನಾಡಿ, ಆಸಿಫಾ ಮೇಲಿನ ಅತ್ಯಾಚಾರ ಪ್ರಕರಣ, ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ದೇಶದಲ್ಲಿ ಇಂತಹ ಹೀನಾ ಕೃತ್ಯಗಳು ಮರುಕಳಿಸುವ ಮುನ್ನವೇ ಕಠಿಣ ಕಾನೂನು ಜಾರಿಯಾಗಬೇಕು. ನಾವು ಈ ಕೂಡಲೇ ರಾಷ್ಟ್ರಪತಿಗಳಿಗೆ ಮೆಮೋ ರೆಂಡಮ್ ಕಳಿಸ್ತೇವೆ ಅಂತ ಹೇಳಿದ್ದಾರೆ..