Uncategorized

ತೆನೆ ಹೊತ್ತ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ

 

ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ತಾರೆಯರು ರಾಜಕೀಯ ಪ್ರಚಾರಕ್ಕೆ ಇಳಿದಿದ್ದು, ಇದೀಗ ನಟಿ ಅಮೂಲ್ಯ ಕೂಡ ಜೆಡಿಎಸ್ ಪರ ಪ್ರಚಾರಕ್ಕೆ ಇಳಿದಿದ್ದಾರೆ.
ನಟಿ ಅಮೂಲ್ಯ ಇದೀಗ ರಾಜಕೀಯ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಮೂಲ್ಯ ಮಾವ ರಾಮಚಂದ್ರ ಬಿಜೆಪಿ ಪಕ್ಷ ತೊರೆದು ಇಂದು ಜೆಡಿಎಸ್ ಪಕ್ಷ ಸೇರಿದ್ದು, ನಟಿ ಅಮೂಲ್ಯ ತೆನೆ ಹೊರಲು ಸಿದ್ಧವಾಗಿದ್ದಾರೆ.
ಬಿಜೆಪಿಯಲ್ಲಿ ಶಾಸಕ ಸ್ಥಾನಕ್ಕೆ ಪೈಪೋಟಿ ನಡೆಸಿದ್ದ ಅಮೂಲ್ಯ ಅವರ ಮಾವ, ಮಾಜಿ ಬಿಬಿಎಂಪಿ ಸದಸ್ಯ ರಾಮಚಂದ್ರ ಅವರು ಬಿಜೆಪಿಯಲ್ಲಿ ಟಿಕೆಟ್ ಸಿಗದೇ ಬಂದಯವೆದ್ದಿದ್ದರು. ಈಗ ರಾಮಚಂದ್ರ ಹಾಗೂ ಅವರ ಸೊಸೆ ನಟಿ ಅಮೂಲ್ಯ ಅಧಿಕೃತವಾಗಿ ಜೆಡಿಎಸ್ ಗೆ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ಪಕ್ಷದಿಂದ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ರಾಮಚಂದ್ರ ಈಗ ಪಕ್ಷ ಬದಲಾಯಿಸಿದ್ದಾರೆ. ಜೆಡಿಎಸ್ ಪಕ್ಷದ ಮೂಲಕ ಚುನಾವಣಾ ಅಖಾಡಕ್ಕೆ ಇಳಿಯುವ ಯೋಚನೆ ಮಾಡಿದ್ದಾರೆ.
ರಾಮಚಂದ್ರ ಅವರ ಜೊತೆಗೆ ಕಾಂಗ್ರೆಸ್ ಟಿಕೆಟ್ ವಂಚಿತರಾದ ಹೇಮಚಂದ್ರ ಸಾಗರ್ ಮತ್ತು ಸಿ.ವಿ ರಾಮನ್ ನಗರ ಟಿಕೆಟ್ ಆಕಾಂಕ್ಷಿ ರಮೇಶ್ ಸಹ ಜೆಡಿಎಸ್ ಪಕ್ಷವನ್ನು ಸೇರಿದ್ದಾರೆ.IMG-20180418-WA0000
Advertisements