Uncategorized

ATM ಗೆ ತಟ್ಟಿದ ಎಲೆಕ್ಷನ್ ಕಾವು ; ಹಣ ಸಿಗದೆ ಪರದಾಡ್ತಿರೋ ಜನರು

IMG-20180417-WA0012 (1)
ವಿಧಾನಸಭಾ ಚುನಾವಣೆಯಲ್ಲಿ ಹಣದ ಹರಿವು ಹೆಚ್ಚಾಗಿದೆ. ಇದೇ ವೇಳೆ ಬ್ಯಾಂಕ್ ಎ.ಟಿ.ಎಂ ಗಳಲ್ಲಿ ಹಣಕ್ಕಾಗಿ ಜನ ಕ್ಯೂ ನಿಲ್ಲುವಂತಾಗಿದೆ.
ಮದುವೆ, ಗೃಹಪ್ರವೇಶ ಮೊದಲಾದ ಕಾರ್ಯಗಳಿಗೆ ದೊಡ್ಡ ಮೊತ್ತದ ಹಣ ಬೇಕಾದ್ದಲ್ಲಿ ಬ್ಯಾಂಕ್ ಗೆ ಹೋಗಬೇಕಾಗಿದೆ. ಇನ್ನು ಬೇರೆಯವರಿಂದ ಸಾಲ ಪಡೆದರು ಸೂಕ್ತವಾದ ದಾಖಲೆ ಹೊಂದಿರಬೇಕು.
ನೀತಿ ಸಂಹಿತೆ ಕಾರಣದಿಂದ ದೊಡ್ಡ ಮೊತ್ತದ ಹಣ ಸಾಗಿಸುವಂತಿಲ್ಲ.
ಕಡಿಮೆ ಮೊತ್ತದ ಹಣ ಪಡೆಯಲು ಎ.ಟಿ.ಎಂ ಗಳಿಗೆ ಹೋದರೆ, ಬಹುತೇಕ ಎ.ಟಿ.ಎಂ ಗಳಲ್ಲಿ ನೋ ಕ್ಯಾಶ್ ಬೋರ್ಡ್ ಹಾಕಲಾಗಿದೆ.
ಕೆಲವು ಎ.ಟಿ.ಎಂ ಹಣ ಇದ್ದರು ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಕ್ಯೂನಲ್ಲಿ ನಿಂತರೂ ಹಣ ಸಿಗುವ ಖಾತ್ರಿ ಇಲ್ಲವಾಗಿದೆ. ಅನೇಕ ಎ.ಟಿ.ಎಂ ಗಳಲ್ಲಿ ಹಣ ತುಂಬಿಸಿದ ಒಂದೆರಡು ಗಂಟೆಯಲ್ಲೇ ಖಾಲಿಯಾಗುತ್ತಿದ್ದೆ.
ನಗದು ಪೂರೈಕೆಯಲ್ಲಿ ಕೊರತೆಯಾಗಿ ಹೆಚ್ಚಿನ ಎ.ಟಿ.ಎಂ ಗಳಿಗೆ ಹಣ ಹಾಕುತ್ತಿಲ್ಲ.
ಬಹುತೇಕ ಎ.ಟಿ.ಎಂ ಗಳಲ್ಲಿ ನೋ ಕ್ಯಾಶ್ ಬೋರ್ಡ್ ಕಾಣ ಸಿಗುತ್ತಿದೆ.